ತಿಪಟೂರು:
ರಾಜ್ಯದೆಲ್ಲೆಡೆ ಸುಗ್ಗಿ ಹಬ್ಬವೆಂದು ಜನಜನಿತವಾಗಿರುವ ‘ಮಕರ ಸಂಕ್ರಾಂತಿ’ ಹಬ್ಬದ ಆಚರಣೆಗೆ ನಾಡಿನ ಜನತೆ ಕೊರೊನಾ ನಡುವೆ ಭೀತಿಯಲ್ಲೂ ಹಬ್ಬಕ್ಕೆ ಸಜ್ಜಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಗಳಲ್ಲಿ ಕಬ್ಬು, ಎಳ್ಳು, ಬೆಲ್ಲ, ಸಕ್ಕರೆ, ಹೂ ಹಣ್ಣು ಸೇರಿದಂತೆ ಹಬ್ಬದ ಖರೀದಿ ಭರಾಟೆ ಜೋರಾಗಿದೆ
ವರದಿ: ಮಂಜು ಗುರುಗದಹಳ್ಳಿ
ಮಧುಗಿರಿ:
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನರು ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಗುಂಪು ಗುಂಪಾಗಿ ಹಬ್ಬದ ಸಂತೆಯಲ್ಲಿ ಸಂಕ್ರಾಂತಿ ಹಬ್ಬದ ವಿಶೇಷವಾದ ಕಬ್ಬು, ಕಡಲೆಕಾಯಿ, ಗೆಣಸು, ಹೂ, ತರಕಾರಿ ಹಣ್ಣುಗಳನ್ನು ಖರೀದಿ ಮಾಡಿದರು.
ಮಧುಗಿರಿ ಸಂತೆ ಮೈದಾನ ಮತ್ತು ಡೂಮ್ ಲೈಟ್ ಸರ್ಕಲ್ ಅಕ್ಕ ಪಕ್ಕದ ರಸ್ತೆ ಬೀದಿಗಳಲ್ಲಿ ರೈತರು ಮಾರಾಟ ಮಾಡುವುದುಮತ್ತು ಗ್ರಾಹಕರು ವ್ಯಾಪಾರ ವಹಿವಾಟು ನಡೆಸುವ ಸನ್ನಿವೇಶ ಕಂಡು ಬಂತು.
ವರದಿ: ಮಹಾಲಿಂಗಯ್ಯ, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy