ಕೊಟ್ಟಾಯಂ: ಕೊಟ್ಟಾಯಂನಲ್ಲಿ ಕ್ರೀಮ್ ಬನ್ ನಲ್ಲಿ ಕ್ರೀಂ ಇಲ್ಲ ಎಂದು ಆರೋಪಿಸಿ ಬೇಕರಿ ಮಾಲೀಕನನ್ನು ದುಷ್ಕರ್ಮಿಗಳು ಥಳಿಸಿದ ಘಟನೆ ಕೇರಳದಲ್ಲಿ ನಡೆದಿದ್ದು, ಇದೇ ಬೇಕರಿಯಲ್ಲಿ ಟೀ ಕುಡಿದ ವೃದ್ಧನಿಗೂ ತಂಡ ಹಲ್ಲೆ ನಡೆಸಿದೆ.
ಇಲ್ಲಿನ ವೈಕಂ ತಾಲೂಕು ಆಸ್ಪತ್ರೆ ಬಳಿ ಇರುವ ಟೀ ಅಂಗಡಿಗೆ ಆರು ಯುವಕರು ಟೀ ಕುಡಿಯಲು ಬಂದಿದ್ದರು. ಈ ವೇಳೆ ಕ್ರೀಂ ಬನ್ ನಲ್ಲಿ ಕ್ರೀಂ ಇಲ್ಲವೆಂದು ಹೇಳಿ ಬೇಕರಿ ಮಾಲಿಕ ಶಿವಕುಮಾರ್, ಅವರ ಪತ್ನಿ ಕವಿತಾ, ಮಕ್ಕಳಾದ ಕಾಶಿನಾಥನ್ ಮತ್ತು ಸಿದ್ಧಿ ವಿನಾಯಕ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಚಾ ಕುಡಿಯಲು ಬಂದ 95 ವರ್ಷದ ವೇಲಾಯುಧನ್ ಎಂಬವರಿಗೆ ಬಿಸಿ ಇಲ್ಲದ ಟೀ ಕುಡಿಯುತ್ತೀಯಾ? ಎಂದು ಪ್ರಶ್ನಿಸಿ ಯುವಕರು ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಮದಾಗಿ ವೇಲಾಯುಧನ್ ಅವರ ಸೊಂಟಕ್ಕೆ ಗಾಯಗೊಂಡಿದೆ ಎನ್ನಲಾಗಿದೆ. ಸದ್ಯ ಪೊಲೀಸರು ದಾಳಿಕೋರರನ್ನು ಮರವಂತುರುತ್ತು ನಿವಾಸಿಗಳು ಎಂದು ಗುರುತಿಸಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5