ಭಾರತದಲ್ಲಿ ಬಹಳ ರಾಜ್ಯಗಳಲ್ಲಿ ಹೈಲಿ ಎಜುಕೇಟೆಡ್, ಸಾಕ್ಷರತಾ ಪ್ರಮಾಣ ಬಹಳ ಹೆಚ್ಚಿರುವ ರಾಜ್ಯಗಳಿವೆ. ಹಾಗೆಯೇ ಈ ರಾಜ್ಯಗಳು ತುಂಬಾ ಸುರಕ್ಷಿತ ಅಂತಾನೂ ಹೇಳಲಾಗಿದೆ. ಭಾರತದಲ್ಲಿ ಮತ್ತೊಂದೆಡೆ ಉತ್ತರಪ್ರದೇಶ, ಹರಿಯಾಣ, ದೆಹಲಿ, ಜಾರ್ಖಂಡ್ ಹೀಗೆ ಕೆಲ ರಾಜ್ಯಗಳಲ್ಲಿ ಕ್ರೈಂ ರೇಟ್ ಕೇಳಿದ್ರೆ ಇಡೀ ದೇಶದ ಜನರನ್ನ ಬೆಚ್ಚಿ ಬೀಳಿಸುತ್ತೆ.
ಆದ್ರೆ ಕ್ರೈಂ ರೇಟ್ ಬಹಳ ಕಡಿಮೆ ಇರುವಂತಹ ಭಾರತದ ಟಾಪ್ 9 ರಾಜ್ಯಗಳ ಬಗ್ಗೆ ತಿಳಿಯೋಣ.
ಜಿವಿಐ ಇಂಡೆಕ್ಸ್ ನ ವರದಿಯ ಆದಾರದಲ್ಲಿ ಸುರಕ್ಷಿತ ರಾಜ್ಯಗಳ ಪಟ್ಟಿ ನೋಡೋದಾದ್ರೆ ( ಜಿವಿಐ ಇಂಡೆಕ್ಸ್ ಪ್ರತಿ ವರ್ಷ ಅಪರಾಧಗಳ ಪ್ರಮಾಣ , ಪ್ರಮುಖವಾಗಿ ಮಹಿಳೆಯರ ಮೇಲಿನ ದೌರ್ಜನ್ಯದ ಆಧಾರದ ಮೇಲೆ ನಡೆಸಲಾಗುವ ಸಮೀಕ್ಷೆಯ ವರದಿ) – ಈ ವರದಿಯಲ್ಲಿ ಹಿಂದಿನ ವರ್ಷಗಳ ಅಪರಾಧಗಳು ಹಾಗೂ ಈಗಿನ ಅಪರಾಧ ಪ್ರಮಾಗಳನ್ನೂ ತಾಳೆ ಹಾಕಿ ಬಳಿಕವೇ ರಿಪೋರ್ಟ್ ರಿಲೀಸ್ ಮಾಡಲಾಗುತ್ತದೆ. ಅಂದ್ರೆ ಜಿವಿಐ ರೇಟ್ ಹೆಚ್ಚಿದ್ದಷ್ಟು ಸುರಕ್ಷತಾ ಪ್ರಮಾಣ ಹೆಚ್ಚಾಗಿರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು.
09. ತಮಿಳುನಾಡು
ಮಹಿಳೆಯರ ಸುರಕ್ಷತಾ ವಿಚಾರ ಅಂತ ಬಂದಾಗ ತಮಿಳುನಾಡು ಸೇಫ್ ಅಂತ ಹೇಳಬಹುದು. ಸಾಮಾನ್ಯ ಜನರಿಗೂ ಕೂಡ ಈ ರಾಜ್ಯ ಸುರಕ್ಷಿತ.
ಜಿವಿಐ ಇಂಡೆಕ್ಸ್ ನ ವರದಿ ಪ್ರಕಾರ ಈ ರಾಜ್ಯದಲ್ಲಿ ಜಿವಿಐ ರೇಟ್ – 0.582 ಇದೆ ಎನ್ನಲಾಗಿದೆ.
ಇಲ್ಲಿ ಕ್ರೈಂ ರೇಟ್ ಕಡಿಮೆಯಿರುವುದಕ್ಕೆ ಪ್ರಮುಖ ಸಾಕ್ಷರತಾ ಪ್ರಮಾಣ ಎಸ್ – ಈ ರಾಜ್ಯದ ಲಿಟ್ರೆಸಿ ರೇಟ್ 81 %
08. ಪಂಜಾಬ್
ಪಮಜಾಬ್ ಭಾರತದ ಅಭಿವೃದ್ಧಿ ಹೊಂದಿದ ಹಾಗೂ ಸಾಕ್ಷರತಾ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳ ಪೈಕಿ ಒಂದು. ಒಮದು ಪಂಜಾಬ್ ನ ಸಂಸ್ಕøತಿ ಮಹಿಳೆಯರಿಗೆ ಗೌರವ ನೀಡುವುದು, ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವುದನ್ನ ಪ್ರೇರೇಪಿಸುತ್ತೆ. ಇದು ಒಂದು ಕಾರಣ ಇರಬಹುದು.
ಜಿವಿಐ ರೇಟ್ – 0.602
ಇಲ್ಲಿನ ಲಿಟ್ರೆಸಿ ರೇಟ್ – ಅಂದಾಜು 86 %
07. ಕರ್ನಾಟಕ
ನಮ್ಮ ರಾಜ್ಯ, ನಮ್ಮ ಹೆಮ್ಮೆಯ ಕರ್ನಾಟಕ 7ಕನೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ಕೀರ್ತಿಯೂ ನಮ್ಮ ರಾಜ್ಯಕ್ಕೆ ಇದೆ. ಜೊತೆಗೆ ಸುಂದರವಾದ , ಸಾಂಸ್ಕøತಿಕವಾಗಿ ಶ್ರೀಮಂತ ರಾಜ್ಯವೂ ಹೌದು. ಮತ್ತೊಂದು ಹೈಲೀ ಎಜುಕೇಟೆಡ್ಸ್. ಸಾಕ್ಷರತಾ ಪ್ರಮಾಣ ಹೆಚ್ಚು. ಹೆಚ್ಚು ವಿದ್ಯಾವಂತರು ನಮ್ಮ ರಾಜ್ಯದಲ್ಲಿ ಇರುವ ಕಾರಣಕ್ಕೆ ಕ್ರೈಂ ರೇಟ್ ಬಾರತದ ಇತರೇ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಬಹಳ ಕಡಿಮೆ ಇದೆ. ಇನ್ನೂ ಇತರೇ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯ ಮಹಿಳೆಯರಿಗೆ ಹೆಚ್ಚು ಸೇಫ್ ಅಂತ ಹೇಳಲಾಗಿದೆ.
ಜಿವಿಐ – 0.603
ಲಿಟ್ರೆಸಿ ರೇಟ್ – ಅಂದಾಜು 87 -88 %
06. ಹಿಮಾಚಾಲ ಪ್ರದೇಶ
ಹಿಮಾಲಯದ ತಪ್ಪಲಲ್ಲಿ ಇರುವ ಹಿಮಾಚಲ ಪ್ರದೇಶ ವಿಶೇಷವಾಗಿ ತನ್ನ ಸೌಂದರ್ಯ , ಪ್ರಕೃತಿಗೆ ಫೇಮಸ್.
ಇಲ್ಲಿ ಲಿಟ್ರೆಸಿ ರೇಟ್ ಇತರೇ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಕಡಿಮೆಯಿದೆ. ಆದ್ರೆ ಇಲ್ಲಿನ ಪುರುಷರ ಲಿಟ್ರೆಸಿ ರೇಟ್ 93 % ಇದೆ.
ಆದ್ರೂ ಈ ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆಯಿದೆ. ವಿಸೇಷವಾಗಿ ಮಹಿಳೆಯರಿಗೆ ಈ ರಾಜ್ಯ ಬಹಳ ಸೇಫ್.
ಜಿವಿಐ ರೇಟ್ -0.604
05. ಮಣಿಪುರ
ವಿಭಿನ್ನ ಸಂಸ್ಕøತಿ, ಸುಂದರ ಪ್ರಕೃತಿಯಿಂದಲೇ ಈ ರಾಜ್ಯ ಫೇಮಸ್. ಈ ರಾಜ್ಯದಲ್ಲಿ ವಿಶೇಷವಾಗಿ ಇಲ್ಲಿನ ಸಂಸ್ಕøರತಿ ಮಹಿಳೆಯರಿಗೆ ಗೌರವಿಸುವುದನ್ನ ಕಲಿಸುತ್ತೆ.
ಜಿವಿಐ ರೇಟ್ -0.610
ಲಿಟ್ರೆಸಿ ರೇಟ್ – ಅಂದಾಜು 88 %
04. ಸಿಕ್ಕಿಂ
ಸಂಸ್ಕøತಿಯಿಂದ ಜನರಿಗೆ ಹತ್ರತಿರವಾಗಿರುವ ಈ ರಾಜ್ಯ ಸುಂದರತೆಗೆ ಫೇಮಸ್ ಕೂಡ.
ಜಿವಿಐ ರೇಟ್ -0.614
ಲಿಟ್ರೆಸಿ ರೇಟ್ – ಅಂದಾಜು 85 %
03. ಮಿಜೋರೋಮ್
ಜಿವಿಐ ರೇಟ್ -0.627
ಲಿಟ್ರೆಸಿ ರೇಟ್ – ಅಂದಾಜು 91 %
02. ಕೇರಳ
ನಮ್ಮ ಕರ್ನಾಟಕದ ನೆರೆ ರಾಜ್ಯ ಕೇರಳದಲ್ಲಿ ಅತಿ ಹೆಚ್ಚು ಜನ ವಿದ್ಯಾವಂತರಿದ್ದರೆ. ಇಲ್ಲಿ ವಿಶೇಷವಾಗಿ ಗಮನಿಸೋದಾದ್ರೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ತುಂಬಾನೆ ಕಡಿಮೆಯಿದೆ.
ಜಿವಿಐ ರೇಟ್ -0.634
ಲಿಟ್ರೆಸಿ ರೇಟ್ – ಅಂದಾಜು 93-94 %
01. ಗೋವಾ
ಯುವಕರ ಫೇವರೇಟ್ ಸ್ಥಳ ಗೋವಾ. ಸೇಫ್ಟಿಯ ವಿಚಾರದಲ್ಲಿಯೂ ಗೋವಾ ನಂಬರ್ 1. ಇಲ್ಲಿ ಮಹಿಳೆಯರಿಗೆ ರಾತ್ರಿ ವೇಳೆಯೂ ಅತ್ಯಂತ ಸುರಕ್ಷಿತ ಅಂತ ಹೇಳಲಾಗುತ್ತೆ.
ಜಿವಿಐ ರೇಟ್ -0.656
ಲಿಟ್ರೆಸಿ ರೇಟ್ – ಅಂದಾಜು 93 %
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB