ಬೆಂಗಳೂರು: ಕಾರಿನಲ್ಲಿ ತೆರಳುತ್ತಿದ್ದ ದಂಪತಿಗೆ ಪುಂಡರು ಅಡ್ಡಗಟ್ಟಿ ಕಿರುಕುಳ ನೀಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಬೆಂಗಳೂರಿನ ಕೆಆರ್ ಪುರಂ ನ ಟಿಸಿ ಪಾಳ್ಯ ಜಂಕ್ಷನ್ ನಲ್ಲಿ ಮಾರ್ಚ್ 9ರ ರಾತ್ರಿ 9 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ.
KA 01 Q 9634 ಸಂಖ್ಯೆಯ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರೆಡ್ ಸಿಗ್ನಲ್ ಇದ್ದಾಗ ಸೈಡ್ ಬಿಟ್ಟಿಲ್ಲ ಎಂದು ಆರೋಪಿಸಿ ಪುಂಡಾಟ ಮೆರೆದಿದ್ದಾರೆ. ಕಾರಿನಲ್ಲಿ ದಂಪತಿಗಳ ಜೊತೆ ಮಗು ಕೂಡ ಇದ್ದರೂ, ಬೈಕ್ ನಲ್ಲಿ ಬಂದ ದುಷ್ಕರ್ಮಿಗಲು ಕಾರಿನ ಮೇಲೆ ದಾಳಿ ಮಾಡಿದ್ದಾರೆ.
ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಕಾರಿನ ಮಿರರ್ ಅನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ.
ಈ ಕುರಿತು ಸಂತ್ರಸ್ಥ ಕಾರು ಮಾಲೀಕ ನಿರಂಜನ್ ಅವರು ಟ್ವೀಟ್ ಮಾಡಿದ್ದು, ‘ಈ ಘಟನೆ ಮಾರ್ಚ್ 9 ರಂದು ರಾತ್ರಿ 9 ಗಂಟೆಗೆ ಟಿಸಿ ಪಾಳ್ಯ ಸಿಗ್ನಲ್ ಬಳಿ ನಡೆದಿತ್ತು. ಸಿಗ್ನಲ್ ಇದ್ದ ಕಾರಣ ಕಾರು ನಿಲ್ಲಿಸಲಾಗಿತ್ತು. ಹಿಂದೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಾರ್ನ್ ಮಾಡಿದ್ದಾರೆ. ರೆಡ್ ಸಿಗ್ನಲ್ ಇದ್ದ ಕಾರಣ ನಾನು ಕಾರನ್ನು ಮೂವ್ ಮಾಡಲಿಲ್ಲ. ಈ ವೇಳೆ ಅವರು ನನ್ನ ಕಾರನ್ನು ಅಡ್ಡಗಟ್ಟಿ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನಲ್ಲಿ ಮಗು ಇದೆ ಎಂದರೂ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನಲ್ಲಿದ್ದ 10 ತಿಂಗಳ ಮಗು ಸೇರಿದಂತೆ ನನ್ನ ಕುಟುಂಬವನ್ನು ರಕ್ಷಿಸಲು ನಾನು ಪರದಾಡಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಕರಣ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4