ನಿಮಗೆ ತಿಳಿದಿರುವಂತೆ ಶಿವಶಕ್ತಿ ಬಾಲಾಜಿ ಎಂಬ ವ್ಯಕ್ತಿ ಸಂವಾದ ಎಂಬ ಯುಟ್ಯೂಬ್ ಫೇಸ್ಬುಕ್ ಚಾನಲ್ ನಲ್ಲಿ ಕ್ರೈಸ್ತ ಸಭಾ ಪಾಲಕರ ದೇವರ ಹಾಗೂ ಬೈಬಲ್ ವಿರುದ್ಧವಾಗಿ ಮಾತನಾಡುತ್ತಾ ವಿಷ ಬೀಜ ಬಿತ್ತುವ ಕಾರ್ಯವನ್ನು ಮಾಡುತ್ತಿದ್ದ .
ಇದು ರಾಜ್ಯದ ಕ್ರೈಸ್ತರಲ್ಲಿ ಬಹಳ ನೋವುಂಟು ಮಾಡಿದ್ದು.. ಈ ಸಂದರ್ಭದಲ್ಲಿ *ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಸಂಸ್ಥೆಯ ನೇತೃತ್ವದಲ್ಲಿ ಈ ವ್ಯಕ್ತಿಯ ಮೇಲೆ ಮಾನ್ಯ ಪೊಲೀಸ್ ಮಹಾ ನಿರ್ದೇಶಕರು (ಡಿಜಿಪಿ) ರವರಿಗೆ ದೂರು ನೀಡಲಾಗಿತ್ತು. ಹಾಗೂ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಮ್ಮ ಜಿಲ್ಲಾಧ್ಯಕ್ಷರಾದ ರವಿಕುಮಾರ್ ಹಾಗೂ ಸಲೋಮಾನ್ ರವರಿಂದ ಅವನ ಮೇಲೆ ದೂರು ದಾಖಲು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ವರಿಷ್ಠಾಧಿಕಾರಿಗಳು ಆತನ ಮೇಲೆ ಕ್ರಮವನ್ನು ಕೈಗೊಂಡಿದ್ದರು ಅದಾಗಿಯೂ ಮತ್ತೆ ಕ್ರೈಸ್ತರನ್ನು ನಿಂದಿಸುವ ಕಾರ್ಯ ಮುಂದುವರಿಸಿದಾಗ ದಿನಾಂಕ.02.03.2023 ರಂದು ಮಾನ್ಯ ಡಿಜಿಪಿ ರವರಿಗೆ ದೂರು ನೀಡಲಾಗಿತ್ತು. ಈ ಸಂದರ್ಭದಲ್ಲಿ ಸ್ಪಂದಿಸಿದ ಪೊಲೀಸ್ ಇಲಾಖೆ ಹಾಗೂ ದಂಡಾಧಿಕಾರಿಗಳು 5, ಲಕ್ಷದ ಬಾಂಡ್ ಬರೆಸಿಕೊಳ್ಳುವ ಮೂಲಕ ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆ ಎಂದು ಬ್ರದರ್, ಸಲೋಮಾನ್ ಹಾಗೂ ಜಿಲ್ಲಾಧ್ಯಕ್ಷರಾದ ರವಿಕುಮಾರ್ ರವರು ನಮಗೆ ತಿಳಿಸಿರುತ್ತಾರೆ.
ಈ ನಮ್ಮ ಮನವಿಯನ್ನು ಆಲಿಸಿ ಕ್ರೈಸ್ತ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ ಮಾನ್ಯ ಪೊಲೀಸ್ ನಿರ್ದೇಶಕರಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವರಿಗೂ ಹಾಗೂ ದಂಡಾಧಿಕಾರಿಯವರೆಗೂ ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ವತಿಯಿಂದ ಧನ್ಯವಾದಗಳು ತಿಳಿಸುತ್ತೇವೆ.
.. ನಿಮ್ಮ ಪ್ರಜ್ವಲ್ ಸ್ವಾಮಿ
ಸಂಸ್ಥಾಪಕ ಅಧ್ಯಕ್ಷರು
ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ)
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


