ಶಾಂತಿ ಪ್ರಿಯರಾದ ಕ್ರೈಸ್ತರ ಸೇವೆ ಸಮಾಜಕ್ಕೆ ಅತ್ಯಗತ್ಯ. ಕ್ರೈಸ್ತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕನ್ನಡ ಕ್ರೈಸ್ತರ ಪರವಾಗಿ ಕರ್ನಾಟಕ ಪ್ರಾಂತ್ಯ ಧರ್ಮಗುರುಗಳ ಭಗಿನಿಯರ ಮತ್ತು ಸಂಘ ಸಂಸ್ಥೆಗಳ ನಿಯೋಗದ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ‘ಕ್ರೈಸ್ತರು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಬೇಕು. ಕ್ರೈಸ್ತರ ಸೇವಾ ಕಾರ್ಯಗಳಲ್ಲಿ ಸಮರ್ಪಣಾ ಭಾವ ಪ್ರಕಾಶಿಸುತ್ತದೆ. ಶಿಕ್ಷಣ, ಆರೋಗ್ಯ ಸೇರಿ ವಿವಿಧ ಸೇವಾ ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯ ಸಲ್ಲಿಸಿರುವ ಸೇವೆ ಅವಿಸ್ಮರಣಿಯ. ಸಮುದಾಯಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಸರ್ಕಾರದ ಜತೆಗೆ ಧರ್ಮಗುರುಗಳು, ಭಗಿನಿಯರು ಕೈಜೋಡಿಸಿದರೆ, ಸರ್ವಜನಾಂಗದ ಶಾಂತಿಯ ತೋಟವೆನಿಸಿರುವ ಕರ್ನಾಟಕದಲ್ಲಿ ಉತ್ತಮ ಜೀವನ ಸಾಧ್ಯ’ ಎಂದು ಹೇಳಿದರು.
ನಿಯೋಗದಲ್ಲಿ ಬೆಂಗಳೂರು ಮಹಾಧರ್ಮ ಕ್ಷೇತ್ರದ ಗುರು ಸಿ. ಫ್ರಾನ್ಸಿಸ್, ಕರ್ನಾಟಕ ಕ್ರೈಸ್ತ ಧರ್ಮಗುರುಗಳು ಬಳಗದ ಅಧ್ಯಕ್ಷ ಎ. ಥಾಮಸ್, ಉಪಾಧ್ಯಕ್ಷ ಬಾರ್ತಲೋಮಿಯೊ, ಕಾರ್ಯದರ್ಶಿ ಪ್ರದೀಪ್ ಜಡ್, ಮೈಸೂರಿನ ಆರೋಗ್ಯಸ್ವಾಮಿ, ಚಿಕ್ಕಮಗಳೂರಿನ ಆಂಟೋನಿ ರಾಜು, ಅಖಿಲ ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


