ಕೊರಟಗೆರೆ : ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಬೆಳೆಗಳಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಅರಿವು ಮೂಡಿಸಲು ಪ್ರವಾಸ ಕೈಗೊಂಡು ತರಬೇತಿ ನೀಡಲಾಗುವುದು ಎಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ವಿಶ್ವವಿದ್ಯಾಲಯದ ವಿಸ್ತಾರಣ ಪ್ರಾಧ್ಯಾಪಕರಾದ ಮಧುಶ್ರೀ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಮೂರು ತಿಂಗಳ ಶಿಬಿರದಲ್ಲಿ ಬೆಳೆ ಸಮೀಕ್ಷೆ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾವಹಿಸಿ ಮಾತನಾಡಿದರು.
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ವಿಶ್ವವಿದ್ಯಾಲಯದಿಂದ ೨೦ ಜನ ವಿದ್ಯಾರ್ಥಿಗಳಲ್ಲಿ ೧೦ ಜನ ವಿದ್ಯಾರ್ಥಿಗಳು ಹಾಗೂ ೧೦ ಜನ ವಿದ್ಯಾರ್ಥಿನಿಯರ ತಂಡ ಮೂರು ತಿಂಗಳ ಕಾಲ ಕೋಡ್ಲಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಬೆಳೆಯುವ ಬೆಳಗಳ ಸಮೀಕ್ಷೆ, ರೋಗ ನಿವಾರಣೆ, ಕೀಟ ನಿವಾರಣೆ ಸೇರಿದಂತೆ ರೈತರಿಗೆ ಯಾವ ರೀತಿ ಬೆಳೆಗಳನ್ನ ಬೆಳೆದರೆ ಉತ್ತಮ ಫಸಲು ಬೆಳೆಯಬಹುದು ಎಂದು ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.
ಪಿಎಸೈ ಯೋಗೀಶ್ ಮಾತನಾಡಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಕೋಡ್ಲಹಳ್ಳಿ ಗ್ರಾಮದಲ್ಲಿ ಬೆಳೆಗಳ ಬಗ್ಗೆ ಅಧ್ಯಾಯನ ಮಾಡಿ ಉತ್ತಮ ಬೆಳೆ ಬರಲು ಯಾವ ಗೊಬ್ಬರ ಹಾಗೂ ಬೆಳೆಯುವ ವಿಧಾನವನ್ನ ತಿಳಿಸಲು ನಮ್ಮ ಗ್ರಾಮಕ್ಕೆ ಆಗಮಿಸಿದ್ದು, ಇದರ ಉಪಯೋಗವನ್ನ ನಮ್ಮ ರೈತ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ತಂಬಾಟ್ ಡಾ.ಚಂದ್ರಶೇಖರ್, ಡಾ.ಕೃಷ್ಣ, ಡಾ.ಆರ್.ಕೃಪಾಶ್ರೀ, ಶಾಲೆಯ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿದ್ದರಾಜು, ಮುಖ್ಯಶಿಕ್ಷಕಿ ನಳಿನ, ಸೇರಿದಂತೆ ಊರಿನ ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC