ವರದಿ: ಹಾದನೂರು ಚಂದ್ರ
ಸರಗೂರು: ತಾಲೂಕಿನಾದ್ಯಂತ ಕಳೆದ ತಿಂಗಳಿಂದ ಕಾಡು ಪ್ರಾಣಿಗಳಿಂದ ದಾಳಿ ಹೆಚ್ಚಾಗಿದ್ದು ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಮತ್ತು ಪ್ರಾಣ ಹಾನಿ ಸಂಭವಿಸಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಎಚ್ಚೆತ್ತುಕೊಳ್ಳದೆ. ಹುಲಿ, ಚಿರತೆ, ಕಾಡಾನೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದೇ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಬಿಜೆಪಿ ತಾಲೂಕು ಘಟಕದ ರೈತ ಮೋರ್ಚಾ ವತಿಯಿಂದ ಸರಗೂರು ಅರಣ್ಯ ವಲಯ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಹಾಗೂ ತಾಲ್ಲೂಕು ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಕಾಡುಪ್ರಾಣಿಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗೆ ಸಚಿವರು ಹಾಗೂ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಗೌಡ ಮಾತನಾಡಿ, ಕಳೆದ ಒಂದು ವಾರದಿಂದ ಬಡಗಲಪುರ ಗ್ರಾಮದ ರೈತ ಮೇಲೆ ಹುಲಿ ಗಾಯಗೊಂಡರು, ಈ ಘಟನೆ ಮಾಸುವ ಮುನ್ನ ಇನ್ನೊಂದು ಘಟನೆ ಸೋಮವಾರ ಮುಳ್ಳೂರು ಬೆಣ್ತಗೆರೆ ಗ್ರಾಮದ ರೈತ ರಾಜಶೇಖರ್ ಎಂಬುವರ ಮೇಲೆ ಹುಲಿ ದಾಳಿ ನಡೆಸಿದೆ, ಆದರೆ ಈ ಘಟನೆ ಸಚಿವ ಈಶ್ವರ್ ಬಿ. ಖಂಡ್ರೆರವರ ಗಮನಕ್ಕೆ ಬಂದಿದ್ದು, ಆದರೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದೆ ರೈತರನ್ನು ಕಡೆಗಣಿಸಿದ್ದಾರೆ.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ಒಂದು ತಿಂಗಳಿಂದ ಹುಲಿ ಹಾವಳಿ ಹೆಚ್ಚಾಗಿದ್ದು, ಜನಜೀವನ ಮಾಡಲು ಕಷ್ಟಕರವಾಗಿದೆ. ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಾಣಿಗಳನ್ನು ತಡೆಗಟ್ಟಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಕೆ.ಪಿ.ಗುರುಸ್ವಾಮಿ ಮಾತನಾಡಿ, ಈ ಕಾಂಗ್ರೆಸ್ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಕಡೆಯಲ್ಲಿ ಭಾಷಣ ಮಾಡಿಕೊಂಡು ಬರುತ್ತಿದ್ದಾರೆ. ಅದರೆ ಅವರು ಅಕ್ರಮ ರೆಸಾರ್ಟ್ ಗಳಿಗೆ ಮಾತ್ರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅರಣ್ಯ ಇಲಾಖೆಯವರು ಜನರ ಮತ್ತು ರೈತರಿಗೆ ಪರಿಹಾರವನ್ನು ಎರಡು ವರ್ಷಗಳು ಕಳೆದರೂ ನೀಡಲು ನಿರಾಕರಿಸುತ್ತಿದ್ದಾರೆ. ಸರ್ಕಾರ ಅಧಿಕಾರಿಗಳು ಪರವಾಗಿ ನಿಂತಿದೆ ಆರೋಪಿಸಿದರು.
ಹೆಡಿಯಾಲ ಉಪ ವಲಯ ಅರಣ್ಯಾಧಿಕಾರಿ ಡಿ ಪರಮೇಶ್ ರವರು ಮನವಿ ಸ್ವೀಕರಿಸಿ ಮಾತನಾಡಿ, ಸರಗೂರು ಮತ್ತು ಹೆಡಿಯಾಲ ಭಾಗದಲ್ಲಿ ಮೂರು ನಾಲ್ಕು ಕಡೆ ಹುಲಿ ಕಾರ್ಯಾಚರಣೆ ನಡೆಯುತ್ತಿದೆ. ಅದರಂತೆ ಎರಡು ಕಡೆ ಕಾರ್ಯಾಚರಣೆಯಲ್ಲಿ ಎರಡು ಹುಲಿ ಸೆರೆ ಹಿಡಿಯಲಾಗಿದೆ. ಇನ್ನೂ 7–8 ಹುಲಿ ಇವೆ ಎಂದು ಕಂಡು ಬಂದಿದೆ. ಅವುಗಳನ್ನು ಸೆರೆ ಹಿಡಿಯಲಾಗುವುದು. ಬೆಳೆ ಪರಿಹಾರ ಬಂದಿಲ್ಲ ಹೇಳಿದ್ದಿರಾ, ನಮ್ಮ ಸಿಬ್ಬಂದಿಗಳು ನಮ್ಮ ಗಮನಕ್ಕೆ ತಂದಿದ್ದಾರೆ. ಅದು ಸರ್ಕಾರ ಮಟ್ಟದಲ್ಲಿ ಇದೆ. ಅನುದಾನ ಬಂದ ಕೂಡಲೇ ನೀಡಲಾಗುವುದು ಎಂದರು. ಸಿ.ಕೆ.ಗಿರೀಶ್ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ವೆಂಕಟೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಶಂಭೇಗೌಡ, ಜಿಲ್ಲಾ ವಕ್ತಾರ ವಸಂತ್ ಕುಮಾರ್, ಜಿಲ್ಲಾ ವಕ್ತಾರ ದಯಾನಂದ ಪಾಟೀಲ್, ಜಿಪಂ ಸದಸ್ಯರು ವೆಂಕಟಸ್ವಾಮಿ, ಹೆಚ್.ಸಿ.ಲಕ್ಷ್ಮಣ್, ವೈ.ಟಿ.ಮಹೇಶ್, ಪ್ರಭಾಕರ್ ಜೈನ್, ಜಿಲ್ಲಾ ಮುಖಂಡರು, ಚಂದ್ರಶೇಖರ್, ಪರೀಕ್ಷಿತ್ ರಾಜ್ ಅರಸು, ಕಾರ್ಯದರ್ಶಿ ಮಂಜುನಾಥ್, ಮಾದಾಪುರ ನಂದೀಶ್, ಮೋತ್ತ ಬಸವರಾಜಪ್ಪ, ಸೈಯದ್ ಅಕ್ರಮ್ ಪಾಷಾ, ಮಹದೇವಪ್ಪ, ಅಬ್ದುಲ್ ರಜಾಕ್, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ ರಾಜು ಬಿಡಗಲು, ಗಂಗಾಧರ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಓಬಿಸಿ ಅಧ್ಯಕ್ಷ ಬಸವರಾಜು, ಯುವ ಮೋರ್ಚಾ ಅಧ್ಯಕ್ಷ ಪೃಥ್ವಿ ಕುಮಾರ್, ವಿವೇಕಾನಂದ, ಗೋಪಾಲಯ್ಯ, ಚೆಲುವಯ್ಯ, ಸ್ವಾಮಿ, ಬೂದನೂರು ಗುರುಸ್ವಾಮಿ, ಬಿ.ಟಿ.ನರಸಿಂಹ ಮೂರ್ತಿ, ಸ್ವಾಮಿ ಉಯ್ಯಂಬಳ್ಳಿ, ಬಿ.ಗುರುಸ್ವಾಮಿ, ವೀರಭದ್ರಪ್ಪ, ಗಣಪತಿ, ಶಿವಕುಮಾರ, ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಶಿವಕುಮಾರ್, ಅಭಿನಂದನ್, ವೀರಾಂಜನಾಯಕ, ಪ್ರಕಾಶ್, ವಿನಾಯಕ ಪ್ರಸಾದ್, ಬಸವಣ್ಣ, ಅದ್ದೂರಿ ಮಂಜು, ಗುರುಪ್ರಸಾದ್, ಚೆನ್ನಪ್ಪ, ಶ್ರೀನಿವಾಸ್, ಜೈ ಕುಮಾರ್, ಸೋಮನಾಯಕ, ಶ್ರೀನಿವಾಸ್, ಗೋವಿಂದೇಗೌಡ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಪ್ರಾಣಿ–ಮಾನವ ಸಂಘರ್ಷ ತಡೆಯಲು ಸಚಿವರು ಹಾಗೂ ಶಾಸಕರು ವಿಫಲರಾಗಿದ್ದಾರೆ. ಅಕ್ರಮ ರೆಸಾರ್ಟ್ ಗಳಿಗೆ ನೋಡಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಅನುಮೋದನೆ ನೀಡುತ್ತಾರೆ. ಕಾಡು ಪ್ರಾಣಿಗಳು ತಡೆಗಟ್ಟಲು ಯಾಕೆ ಕೆಲಸ ಮಾಡುತ್ತಿಲ್ಲ.ಅಕ್ರಮ ರೆಸಾರ್ಟ್ ಪರವಾಗಿ ಕೆಲಸ ಮಾಡುವ ರಾಜ್ಯ ಸರ್ಕಾರ.
— ಮನುಗನಹಳ್ಳಿ ಮಂಜುನಾಥ, ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾ ಕಾರ್ಯದರ್ಶಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



