ಸರಗೂರು: ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ದೇವಾಲಯಗಳಲ್ಲಿ ಭಕ್ತರು ದಾಂಗುಡಿ ಇಟ್ಟಿದ್ದರು. ಅದರಲ್ಲೂ ಶಿವನ ದೇವಾಲಯಗಳಿಗಂತೂ ಪೂರ್ಣ ಬೇಡಿಕೆ. ಸಹಸ್ರಾರು ಮಂದಿ ಭಕ್ತರು ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಿದರು
ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದ ತಾಯಿಗೆ ಹಾಗೂ ಶ್ರೀ ಕ್ಷೇತ್ರ ಬೇಲದಕುಪ್ಪೆ ಮಹದೇಶ್ಶವರ ದೇವಸ್ಥಾನದಗಳಲ್ಲಿ ಭೀಮನ ಅಮಾವಾಸ್ಯೆಯನ್ನು ದೇವಾಲಯಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಗುರುವಾರ ಬೆಳಗಿನಿಂದಲೇ ಭಕ್ತಾದಿಗಳು ದೇವಾಲಯಗಳತ್ತ ಹೆಜ್ಜೆ ಹಾಕಿದರು. ಪ್ರತಿ ಅಮಾವಾಸ್ಯೆಯ ಸಂದರ್ಭದಲ್ಲೂ ತಾಲೂಕಿನ ದೇವಾಲಯಗಳಿಗೆ ತೆರಳಿ, ಪೂಜೆ ಸಲ್ಲಿಸುವುದು ವಾಡಿಕೆ. ಮಾಮೂಲಿಗಿಂತ ಇಂದು ಜ್ಯೋರ್ತಿಭೀಮೇಶ್ವರ ವ್ರತದ ಹಿನ್ನೆಲೆಯಲ್ಲಿ ತಾಲೂಕಿಯಲ್ಲಿ ಹಬ್ಬದ ವಾತಾವರಣ ಕಂಡುಬಂತು. ಕಾಲಿಡಲೂ ಜಾಗವಿಲ್ಲದಂತೆ ಜನಸ್ತೋಮ ದೇವಾಲಯಗಳಲ್ಲಿ ನೆರೆದಿದ್ದು, ವಿಶೇಷವಾಗಿತ್ತು.
ಚಿಕ್ಕ ದೇವಮ್ಮನಾ ಬೆಟ್ಟ ಹಾಗೂ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ, ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನ ಭೀಮನ ಅಮಾವಾಸ್ಯೆ ಪೂಜೆಗೆ ಪ್ರಸಿದ್ಧಿ. ಇಲ್ಲಿಗೆ ಜಿಲ್ಲೆ ಸೇರಿದಂತೆ ನಾನಾ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವರದರ್ಶನ ಪಡೆದರು. ಸಾವಿರಾರು ಭಕ್ತಾದಿಗಳಿಗೆ ಗ್ರಾಮಸ್ಥರಿಂದ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ರಘು, ರಾಕೇಶ್, ಬೆಟ್ಟದ ಪಾರುಪತ್ತೇದಾರು ಶಾಂತಿಪುರ ಮಹದೇವಸ್ವಾಮಿ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ದರಾಜು, ಅರ್ಚಕರಾದ ಪ್ರಸನ್ನ ಕುಮಾರ್, ದೇವಣ್ಣ, ಸಂತೋಷ್, ಮನೋಹರ್, ಚಿಕ್ಕದೇವಣ್ಣ, ಸಿದ್ದಲಿಂಗಸ್ವಾಮಿ, ಶಿವಕುಮಾರ್, ನಿಂಗರಾಜು, ನಿಂಗಣ್ಣ ಲಿಂಗಪ್ಪ, ಮಣಿ, ಮನು, ನಿಂಗರಾಜು, ನಿಂಗಣ್ಣ, ಕೃಷ್ಣ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


