ತಿಪಟೂರು: ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಎಂಬುವರು ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಅವರ ಆತ್ಮಹತ್ಯೆಗೆ ಕಾರಣ ಏನೆಂಬುದು ಪರಿಶೀಲನೆ ಮಾಡದೆ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕ ಕೃಷ್ಣಪ್ಪನವರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯಗಚಿ ಕಟ್ಟೆ ರಾಘವೇಂದ್ರ ಒತ್ತಾಯಿಸಿದರು.
ಒಂದು ಲೆಟರ್ ಮೇಲೆ ಟೈಪಿಂಗ್ ಆಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಕೃಷ್ಣಪ್ಪನವರು ಹಲವು ಹೋರಾಟಗಳ ಮುಖಾಂತರ ಪ್ರಜಾಪ್ರಭುತ್ವ ಉಳಿ ಉಳಿಸಲು ಮಾನವ ಸರಪಳಿಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಗೆ ರಾಜ್ಯಕ್ಕೆ ಪ್ರಥಮ ಸ್ಥಾನ ತಂದು ಕೊಡುವಲ್ಲಿ ಕೃಷ್ಣಪ್ಪನವರ ಪಾತ್ರ ಪ್ರಮುಖವಾದದ್ದು, ಕೃಷ್ಣಪ್ಪನವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಇದು ಕೂಲಂಕುಶವಾಗಿ ತನಿಖೆಯಾಗಬೇಕು ಎಂದರು.
ಕೃಷ್ಣಪ್ಪನವರು ಹೋರಾಟ ಮಾಡಿದವರು ಇವರ ಹೆಸರಿಗೆ ಕಳಂಕ ತರುವ ಕೆಲಸವಾಗಿದೆ, ಒಬ್ಬರ ಹೆಸರನ್ನು ಬರೆದಿಟ್ಟು ಸಾವಿಗೆ ಶರಣಾಗಿರುವುದು ತಪ್ಪು ಎಂದು ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಕೆ.ಎನ್. ಜಯಸಿಂಹ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರು ಶಾಂತಪ್ಪ, ಕುಪ್ಪಾಳುರಂಗಸ್ವಾಮಿ, ಮಂಜುನಾಥ್, ಹಲವರು ಹಾಜರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


