ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಈ ತಿಂಗಳ 9ರಿಂದ 11ರ ವರೆಗೆ ಮೂರು ದಿನ ಜಾಗತಿಕ ಮಟ್ಟದ ‘ಸಿರಿಧಾನ್ಯ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಆಧಾರಿತ ಕೃಷಿ ಮೇಳ ಹಾಗೂ ವಿಚಾರ ಸಂಕಿರಣ’ವನ್ನು ಆಯೋಜಿಸಲಾಗಿದೆ.
ಬೆಂಗಳೂರು ಕೃಷಿ ವಿವಿ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ ಆವರಣದಲ್ಲಿ ಸಂಘಟಿಸಿರುವ ಈ ಕೃಷಿ ಮೇಳದಲ್ಲಿ ವಿವಿಧ ದೇಶಗಳ ಕೃಷಿ ವಿಜ್ಞಾನಿಗಳು ಸಾವಯವ ಪರಿಣಿತರು, ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.


