ಸರಗೂರು: ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತಹಶೀಲ್ದಾರ್ ಚೆಲುವರಾಜು ಅವರು ಧ್ವಜಾರೋಹಣ ನೆರವೇರಿಸಿದರು ಬಳಿಕ ಗಣ್ಯರು ಜ್ಯೋತಿ ಬೆಳಗಿಸಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗಾಂಧೀಜಿ ಫೋಟೋಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು.
ವಕೀಲ ರವಿಶಂಕರ್ ಮಾತನಾಡಿ, ಭವ್ಯ ಭಾರತದ ಪ್ರಜೆಗಳು ಸಂವಿಧಾನದ ಆಶಯಗಳನ್ನು ಅರ್ಥೈಹಿಸಿಕೊಳ್ಳಬೇಕು. ಸಂವಿಧಾನ ಆಶಯಗಳಂತೆ ನಡೆದುಕೊಂಡರೆ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಯ, ಪ್ರಜ್ಞೆಯನ್ನು ವ್ಯಯ ಮಾಡುತ್ತಿದ್ದೇವೆ ಎಂಬ ಆತಂಕವಿದೆ. ಸಂವಿಧಾನದಡಿಯಲ್ಲಿಯೇ ಕೇಂದ್ರ ಸರಕಾರ ರಾಜ್ಯಗಳ ಮೇಲಿನ ಹಿಡಿತ ಸಾಧಿಸಿ ಆಡಳಿತ ನಡೆಸುತ್ತಿದೆ. ಸಂವಿಧಾನವು ಎಲ್ಲ ಧರ್ಮ, ಜಾತ್ಯತೀತ ರಾಷ್ಟ್ರವನ್ನಾಗಿಸುವುದು ಎಂದು ತಿಳಿಸಿದರು.
ತಹಶೀಲ್ದಾರ್ ಚಲುವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಎಲ್ಲರೂ ಅರ್ಥಮಾಡಿಕೊಳ್ಳಲು ಮುಂದಾಗಬೇಕು. ವಿಭಜನೆಯಾದ ದೇಶವನ್ನು ಒಗ್ಗೂಡಿಸಲು ವಿಶ್ವದಲ್ಲೇ ಬಹುದೊಡ್ಡ ಸಂವಿಧಾನ ರಚಿಸಿದ್ದಾರೆ. ಆ ಮೂಲಕ ಆಡಳಿತ ನಡೆಯುತ್ತಿದೆ ಎಂದು ಹೇಳಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ರಾಧಿಕಾಶ್ರೀನಾಥ್, ಉಪಾಧ್ಯಕ್ಷ ವಿನಯ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಸಂತಕುಮಾರಿ, ಕಾಲೇಜು ಪ್ರಾಂಶುಪಾಲ ಡಾ.ಮಲ್ಲೇಶ್, ಗ್ರೇಟು–2 ತಹಶೀಲ್ದಾರ್ ಪರಶಿವಮೂರ್ತಿ, ಸದಸ್ಯರಾದ ರಂಗಸ್ವಾಮಿ, ಉಮಾ ರಾಮು, ಚೈತ್ರಾಸ್ವಾಮಿ, ಮುಖಂಡರಾದ ಶಿವಕುಮಾರ್, ನವೀನ್ ಕುಮಾರ್, ವರ್ತಕರ ಮಂಡಳಿಯ ಶ್ರೀನಿವಾಸ್, ಅಮ್ ಅದ್ಮಿ ತಾಲೂಕು ಅಧ್ಯಕ್ಷ ಗ್ತಾಮೀಣ್ ಮಹೇಶ್,ಸಣ್ಣತಾಯಮ್ಮ, ಆದಿಕರ್ನಾಟಕ ಮಹಾಸಭಾದ ಅಧ್ಯಕ್ಷ ಶಿವಣ್ಣ, ಚೆನ್ನಿಪುರ ಮಲ್ಲೇಶ್, ನಿಂಗರಾಜು, ದೈಹಿಕ ಶಿಕ್ಷಕ ನಾಗೇಶ್, ಉಪತಹಶೀಲ್ದಾರ್ ಸುನೀಲ್ ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಗಣರಾಜೋತ್ಸವ ವಿಷಯ ಕುರಿತು ಸಾಂಸ್ಕತಿಕ ಕಾರ್ಯಕ್ರಮ ನಡೆದವು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಇಟ್ನ ಗ್ರಾಮದ ಶಾಲಾ ವಿದ್ಯಾರ್ಥಿಗಳು, ಅಂತಾರಾಷ್ಟ್ರೀಯ ಕ್ರೀಡಾಪಟು ಮುಳ್ಳೂರು ನಾಗೇಂದ್ರ, ಗ್ರಾಮ ಒನ್ ನ ಪಂಚಾಯತಿ ಬೀದರಹಳ್ಳಿ ವಿ. ಶಿವಕುಮಾರ್, ಮದು ಎಂಸಿ.ತಳಲು, ಪ್ರೇಮ ಮುಳ್ಳೂರು, ವಿನಯ್ ಕುಮಾರ್ ಕೆ.ಬೆಳ್ತೂರು.ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈ ಸಾಧಕರನ್ನು ಸನ್ಮಾನಿಸಲಾಯಿತು.
ಗೈರು ಅಧಿಕಾರಿಗಳ ವಿರುದ್ಧ ಗರಂ:
ತಾಲೂಕು ಆಡಳಿತದಿಂದ ನಡೆದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಿದ್ದರು. ಇದನ್ನು ಗಮನಿಸಿದ ಗರಂ ಆದ ತಹಶೀಲ್ದಾರ್ ಚಲುವರಾಜು ಅವರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಭಾಗಿಯಾಗಬೇಕು. ಆದರೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯತಿ, ನೀರಾವರಿ ಇಲಾಖೆ ಅಧಿಕಾರಿಗಳನ್ನು ಬಿಟ್ಟರೆ ಇನ್ನುಳಿದವರು ಯಾರು ಭಾಗಿಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಗೈರಾದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಖಡಕ್ಕಾಗಿ ಎಚ್ಚರಿಸಿದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy