nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರು  | ಡಿಸೆಂಬರ್ 16ರಂದು ಪತ್ರ ಬರಹಗಾರರಿಂದ ಬೆಳಗಾವಿ ಚಲೋ

    December 12, 2025

    ಡ್ರಗ್ಸ್ ಕಂಟ್ರೋಲ್ ಆಗುವವರೆಗೂ ದಂಧೆಕೋರರ ವಿರುದ್ಧ ಸಮರ: ಗೃಹ ಸಚಿವ ಪರಮೇಶ್ವರ್

    December 11, 2025

    ಗರ್ಭ ಧರಿಸಿದ 325 ಬಾಲಕಿಯರು: ತುಮಕೂರಿನಲ್ಲಿ ಹೆಚ್ಚಿದ ಪೋಕ್ಸೋ ಪ್ರಕರಣಗಳು

    December 11, 2025
    Facebook Twitter Instagram
    ಟ್ರೆಂಡಿಂಗ್
    • ತಿಪಟೂರು  | ಡಿಸೆಂಬರ್ 16ರಂದು ಪತ್ರ ಬರಹಗಾರರಿಂದ ಬೆಳಗಾವಿ ಚಲೋ
    • ಡ್ರಗ್ಸ್ ಕಂಟ್ರೋಲ್ ಆಗುವವರೆಗೂ ದಂಧೆಕೋರರ ವಿರುದ್ಧ ಸಮರ: ಗೃಹ ಸಚಿವ ಪರಮೇಶ್ವರ್
    • ಗರ್ಭ ಧರಿಸಿದ 325 ಬಾಲಕಿಯರು: ತುಮಕೂರಿನಲ್ಲಿ ಹೆಚ್ಚಿದ ಪೋಕ್ಸೋ ಪ್ರಕರಣಗಳು
    • ರಾಷ್ಟ್ರೀಯ ಗಣಿತ ದಿನಾಚರಣೆ: ಡಿ.21ರಂದು ಸರ್ವೋದಯ ಕಾಲೇಜಿನಲ್ಲಿ ಗಣಿತ–ವಿಜ್ಞಾನ ಒಲಂಪಿಯಾಡ್
    • ಡಿ.13ರಂದು ಜಿಲ್ಲಾ ಬಂಜಾರ ಭವನದ ಕಟ್ಟಡ ಉದ್ಘಾಟನೆ
    • ಕಿತ್ತೂರು ರಾಣಿಚೆನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ
    • ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಯುವನಿಧಿ ಫಲಾನುಭವಿಗಳಿಂದ ಅರ್ಜಿ ಆಹ್ವಾನ
    • ತುಮಕೂರು | ಡಿಸೆಂಬರ್ 13—14ರಂದು ಕನ್ನಡ ಭಾಷೆ ಮತ್ತು ಸಾಹಿತ್ಯ ಜಾಗೃತಿ ಕಾರ್ಯಾಗಾರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು ಪ್ರಖರ ವ್ಯಕ್ತಿತ್ವ: ಡಾ.ಹನುಮಂತರಾಯ ವೈ.ಎಸ್.
    ಮಧುಗಿರಿ April 14, 2022

    ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು ಪ್ರಖರ ವ್ಯಕ್ತಿತ್ವ: ಡಾ.ಹನುಮಂತರಾಯ ವೈ.ಎಸ್.

    By adminApril 14, 2022No Comments2 Mins Read
    madugiri ambedkar jayanti

    ಮಧುಗಿರಿ (ಮಿಡಿಗೇಶಿ): ಭಾರತದಲ್ಲಿನ ಹಲವಾರು ಸಾಮಾಜಿಕ ಶೋಷಣೆಗಳನ್ನು ಹೊಡೆದೋಡಿಸಿ ಭಾರತ ಪ್ರಜ್ವಲಿಸುವಂತೆ ಮಾಡುವ ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಬೆಳೆಸುವ ಕನಸನ್ನು ಕಂಡು ಹಲವಾರು ಸುಧಾರಣೆಗಳಿಗೆ ಬುನಾದಿ ಹಾಕಿ, ವಿಭಿನ್ನ ಧರ್ಮ, ಜಾತಿ, ವರ್ಗ, ಪಂಗಡಗಳಿರುವ ಬೃಹತ್ ರಾಷ್ಟ್ರವನ್ನು ಸಂವಿಧಾನದ ಮೂಲಕ ಒಟ್ಟುಗೂಡಿಸಿದ ಆಧುನಿಕ ಭಾರತದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರದು ಪ್ರಖರ ವ್ಯಕ್ತಿತ್ವ, ವಿಶ್ವಮೆಚ್ಚಿದ ಜ್ಞಾನಿಗಳಲ್ಲಿ ಅಗ್ರಗಣ್ಯರಾಗಿದ್ದರು. ಆಧು ಎಂದು ಕಾಲೇಜು ಶಿಕ್ಷಣ ಧಾರವಾಡ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ.ಹನುಮಂತರಾಯ ವೈ.ಎಸ್. ತಿಳಿಸಿದರು.

    ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅಂಬೇಡ್ಕರ್ ಶತಮಾನಗಳಿಂದ ಶೋಷಣೆಗೆ ಒಳಗಾದ ಜನರ ಪ್ರತಿನಿಧಿಯಾಗಿ, ಇಲ್ಲಿನ ಸಾಮಾಜಿಕ ಪಿಡುಗುಗಳ ವಿರುದ್ದ ಗಟ್ಟಿಧ್ವನಿಯೆತ್ತಿದ ಛಲಗಾರರಾಗಿದ್ದರು. ಶಿಕ್ಷಣ ಪಡೆಯುವ ಮೂಲಕ ಏನನ್ನಾದರೂ ಸಾಧಿಸಬಹುದೆಂಬ ಅಚಲ ವಿಶ್ವಾಸ ಹೊಂದಿದ್ದು, ಅಂದಿನ ಕಾಲದಲ್ಲಿ ಅತ್ಯುನ್ನತ ವಿದ್ಯಾಭ್ಯಾಸ ಪಡೆದು, ತಮ್ಮ ಜೀವನವನ್ನೇ ಸಮಾಜದ ಸುಧಾರಣೆಗಾಗಿ ಸಮರ್ಪಿಸಿಕೊಂಡರು.


    Provided by
    Provided by

    ಕತ್ತಲೆಯ ಕೂಪದಲ್ಲಿ ನರಳುತ್ತಿದ್ದ ಅನೇಕ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಸೇರಲು, ಸಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ, ಚುನಾವಣೆಗಳ ಮುಖಾಂತರ ಸಾಮಾನ್ಯ ಪ್ರಜೆಯೂ ಸಹ ಅಧಿಕಾರ ಪಡೆಯುವ ಅವಕಾಶವನ್ನು ಸಂವಿಧಾನದ ಮೂಲಕ ಕಲ್ಪಿಸಿದರು. ಅವರ ಜೀವನಾದರ್ಶಗಳನ್ನು ಎಲ್ಲರೂ ಅಧ್ಯಯನ ಮಾಡುವ ಮೂಲಕ ಅವರ ಚಿಂತನೆಗಳಿಂದ ಸ್ಪೂರ್ತಿ ಪಡೆಯಬೇಕೆಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ನರಸಿಂಹಮೂರ್ತಿ ಟಿ.ಎನ್. ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್‍ರವರು ಹುಟ್ಟಿದ ದಿನವನ್ನು ವಿಶ್ವಸಂಸ್ಥೆ ವಿಶ್ವ ಜ್ಞಾನ ದಿನಾಚರಣೆ ಎಂದು ಆಚರಿಸುತ್ತಿರುವುದು ಸಮಸ್ತ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. ಅವರಲ್ಲಿನ ಜ್ಞಾನದ ಬೆಳಕಿನಿಂದ ಭಾರತದಲ್ಲಿ ಅನೇಕ ಕಾನೂನುಗಳು ಜಾರಿಗೆ ಬಂದಿವೆ.  ಮೀಸಲಾತಿ, ಮಹಿಳೆಯರಿಗೆ ಆಸ್ತಿ ಹಕ್ಕು, ಮತದಾನದ ಹಕ್ಕು, ಕನಿಷ್ಟ ವೇತನ ಜಾರಿ, ಕಾರ್ಮಿಕರಿಗೆ ಎಂಟು ಗಂಟೆಗಳ ಕೆಲಸ ಮಾಡುವ ಅವಧಿ ನಿಗದಿ, ಭಾರತೀಯ ರಿಜರ್ವ ಬ್ಯಾಂಕ್ ಸ್ಥಾಪನೆಗೆ ಮುನ್ನುಡಿ ಬರೆದರು. ಅವರು ಸಾಮಾಜಿಕ ಚಿಂತಕರಾಗಿ ನೀರಾವರಿ ತಜ್ಞ, ಕಾನೂನು ಪಂಡಿತರಾಗಿ, ಆರ್ಥಿಕ ತಜ್ಞತೆ ಜೊತೆಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರು.

    ಮಹಿಳೆಯರ ಶೋಷಣೆಯ ವಿರುದ್ದ ಅವರನ್ನು ಸಬಲರನ್ನಾಗಿಸಲು ಶಿಕ್ಷಣ ನೀಡಿ, ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಎಲ್ಲವರ್ಗಗಳಿಗೆ ಮೀಸಲಾತಿ ನೀಡಿ ಅವರ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಭಾರತದಲ್ಲಿನ ಇಂದಿನ ಮಹಿಳೆಯರು, ದಲಿತರು, ಹಿಂದುಳಿದವರ ಸ್ಥಾನಮಾನ ಸುಧಾರಿಸಿರುವ ಇಂದಿನ ಪರಿಸ್ಥಿತಿಗೆ ಅಂದಿನ ಅಂಬೇಡ್ಕರ್‍ರವರ ಚಿಂತನೆಗಳೇ ಕಾರಣವಾಗಿವೆ. ಭೂಮಿ ಮೇಲೆ ಜನಿಸಿದ ಎಲ್ಲರೂ ಚಿರಂಜೀವಿಯಾಗಲಾರರು ಆದರೆ ಬಾಬಾಸಾಹೇಬ್ ಅಂಬೇಡ್ಕರ್‍ರವರ ಆಲೋಚನೆಗಳು, ಸಾಧನೆಗಳು ಶಾಶ್ವತವಾಗಿ ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ. ಆದುದರಿಂದ ಅಂಬೇಡ್ಕರ್‍ರವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಷ್ಟೂ ಎಲ್ಲರೂ ಜ್ಞಾನವಂತರಾಗುತ್ತಾರೆ. ವಿದ್ಯಾರ್ಥಿಗಳು ವಿಶೇಷ ಆಸಕ್ತಿಯಿಂದ ಅವರ ವಿಚಾರಧಾರೆಗಳನ್ನು ಅರಿಯಬೇಕೆಂದರು.

    ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸತೀಶ್ ಎಸ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕರಾದ ಮಹಮದ್ ರಹಮತುಲ್ಲಾ ಸ್ವಾಗತಿಸಿದರು. ಸೂರ್ಯಪ್ರಕಾಶ್ ವಂದಿಸಿದರು.

    ವರದಿ: ಅಬಿದ್ ಮಧುಗಿರಿ 

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

    admin
    • Website

    Related Posts

    ಪಾವಗಡ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

    December 10, 2025

    ಹೊಸ ಹೆಚ್ ಐವಿ ಸೋಂಕಿತರ ಸಂಖ್ಯೆ ಮಾರಕವಾಗುತ್ತಿದೆ: ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಟಪ್ಪ

    December 2, 2025

    ಹಾಲು ತರಲು ಹೋಗಿದ್ದ ವ್ಯಕ್ತಿಯ ಮೇಲೆ ಹರಿದ ಕಾರು!

    December 2, 2025

    Leave A Reply Cancel Reply

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರು  | ಡಿಸೆಂಬರ್ 16ರಂದು ಪತ್ರ ಬರಹಗಾರರಿಂದ ಬೆಳಗಾವಿ ಚಲೋ

    December 12, 2025

    ತಿಪಟೂರು: ಪತ್ರ ಬರಹಗಾರರ ಉಳಿವಿನ ಬಗ್ಗೆ ಪತ್ರ ಬರಹಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ದಿನ ಲೇಖನ ಸಂದಿಗ್ಧತೆ ಚಳುವಳಿ…

    ಡ್ರಗ್ಸ್ ಕಂಟ್ರೋಲ್ ಆಗುವವರೆಗೂ ದಂಧೆಕೋರರ ವಿರುದ್ಧ ಸಮರ: ಗೃಹ ಸಚಿವ ಪರಮೇಶ್ವರ್

    December 11, 2025

    ಗರ್ಭ ಧರಿಸಿದ 325 ಬಾಲಕಿಯರು: ತುಮಕೂರಿನಲ್ಲಿ ಹೆಚ್ಚಿದ ಪೋಕ್ಸೋ ಪ್ರಕರಣಗಳು

    December 11, 2025

    ರಾಷ್ಟ್ರೀಯ ಗಣಿತ ದಿನಾಚರಣೆ: ಡಿ.21ರಂದು ಸರ್ವೋದಯ ಕಾಲೇಜಿನಲ್ಲಿ ಗಣಿತ–ವಿಜ್ಞಾನ ಒಲಂಪಿಯಾಡ್

    December 11, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.