ತಮಿಳಿನ ಖ್ಯಾತ ನಿರ್ದೇಶಕ ಹಾಗೂ ಹಾಸ್ಯ ನಟ ಡಿಪಿ ಗಜೇಂದ್ರನ್ (68) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ನಲ್ಲ ಕಾಲಂ ಪೊರಂಥಾಚು, ಪಾಂಡಿ ನಟುತ್ ತಂಗಂ, ಬಜೆಟ್ ಪದ್ಮನಾಭನ್, ಮಿಡಲ್ ಕ್ಲಾಸ್ ಮಾಧವನ್, ಸೀನಾ ಥಾನಾ ಸೇರಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಜತೆಗೆ ಪ್ರಿಯಮುದನ್, ಪಿತಾಮಗನ್, ಪೆರಳಗನ್, ವಿಲ್ಲು, ವೇಲಾಯುತಂ, ಚಂದ್ರಮುಖಿ ಸೇರಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮಿಳು ಅಭಿಮಾನಿಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಅವರ ಹಾಸ್ಯ ನಟನೆ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. 2021 ರಲ್ಲಿ ಕೋವಿಡ್ ಸಹ ಬಂದಿತ್ತು ಇವರಿಗೆ ಚೇತರಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದರು. ತಮಿಳು ಚಿತ್ರರಂಗಕ್ಕೆ ಇದು ಒಂದು ತುಂಬಲಾರದ ನಷ್ಟ ಭಗವಂತ ಇವರ ಆತ್ಮಕ್ಕೆ ಶಾಂತಿ ನೀಡಲಿ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಅನೇಕ ನಟರು, ಅಭಿಮಾನಿಗಳು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


