ಗುಬ್ಬಿ: ರೈತರಿಗೆ ಬದುಕಲು ಹೈನುಗಾರಿಕೆಯಲ್ಲಿ ಅವಕಾಶವಿದೆ. ಒಳ್ಳೆಯ ಚಿಂತನೆಗಳು, ಒಳ್ಳೆಯ ಮನಸ್ಸು ಇಟ್ಟುಕೊಂಡು ಕೆಲಸ ಮಾಡಿ. ಪ್ರತಿಯೊಬ್ಬ ಪೋಷಕರಿಗೆ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಬೇಕೆಂದು ಆಸೆ ಇದೆ. ಎ ಅಂದರೆ ಏನು ಅಂತ ಗೊತ್ತಿಲ್ಲ, ಬಿ ಅಂದರೆ ಏನು ಗೊತ್ತಿಲ್ಲ, ಯಾರನ್ನು ಕೇಳುವುದು? ಹಸುಗಳನ್ನು ಹೇಗೆ ಸಾಕಬೇಕು? ಕ್ವಾಲಿಟಿ, ಕ್ವಾಂಟಿಟಿ ಬಗ್ಗೆ ಅರಿವು ಇಲ್ಲದೆ ಇದ್ದು ಗೆದ್ದ ಬಳಿಕ ತಿಳಿಯಿತು, ಅಂದು ನನ್ನ ಮಾತಿಗೆ ಸುಮ್ಮನೆ ಆಗಿದ್ದರೆ ಇಂದು ಆಗಿರುವ ಉತ್ತಮ ಕಾರ್ಯಗಳು ಕುಂಠಿತವಾಗುತ್ತಿದ್ದವು ಎಂದು ಮಾಜಿ ಸಂಸದ ಹಾಗೂ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.
ಗುಬ್ಬಿಯಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತುಮಕೂರು ಜಿಲ್ಲಾ ರೈತರ ಮತ್ತು ಎಂಪಿಸಿಎಸ್ ನೌಕರರ ಮತ್ತು ಸಾಮಾನ್ಯ ಕಲ್ಯಾಣ ಟ್ರಸ್ಟ್ ಹಾಗೂ ಗುಬ್ಬಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಅರ್ಹ ಹಾಲು ಉತ್ಪಾದಕರಿಗೆ ಹಾಲು ಕರೆಯುವ ಯಂತ್ರ ಹಾಗೂ ಮ್ಯಾಟ್‌ಗಳನ್ನು ವಿತರಿಸಲಾಯಿತು. ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲಾಯಿತು.
ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಈ ಕ್ಷೇತ್ರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಶಾಸಕನಾಗಿ ಸೇವೆ ಮಾಡುತ್ತಾ ಬಂದಿದ್ದು, ನಾಲ್ಕು ಬಾರಿಯೂ ವಿರೋಧ ಪಕ್ಷದ ಶಾಸಕನಾಗಿದ್ದು, ವಿರೋಧ ಪಕ್ಷದ ಶಾಸಕರಿಗೆ ಅನುದಾನ ಯಾವ ರೀತಿ ಸಿಗುತ್ತದೆ ಎಂಬುದು ಡಿ.ಕೆ.ಸುರೇಶ್ ಅವರಿಗೆ ಗೊತ್ತಿದೆ. ಈ ಬಾರಿ ಆಡಳಿತ ಪಕ್ಷದ ಶಾಸಕನಾದ ಮೇಲೆ ಮುನ್ನೂರು ಐವತ್ತು ಕೋಟಿ ಅನುದಾನವನ್ನು ಡಿಕೆಶಿ ಅವರು ನೀಡಿದ್ದು, ಬಹುತೇಕ ಕ್ಷೇತ್ರದ ಅಭಿವೃದ್ಧಿ ಮಾಡಿದ್ದು, ಇನ್ನೂ ಇನ್ನೂರು ಕೋಟಿ ಅನುದಾನ ಬಿಡುಗಡೆ ಮಾಡಿಸುವ ಕೆಲಸವನ್ನು ತಾವು ಮಾಡಬೇಕು ಎಂದರು.
ಕುಣಿಗಲ್, ಚನ್ನಪಟ್ಟಣ, ರಾಮನಗರ ಕ್ಷೇತ್ರಕ್ಕೆ ಸಚಿವರ ಬಳಿ ನೇರವಾಗಿ ಯಾರನ್ನು ಕರೆದುಕೊಂಡು ಹೋಗದೆ ಕೆಲಸವನ್ನು ಮಾಡಿಸಿಕೊಂಡು ಬರುವ ವ್ಯಕ್ತಿ ತಾವಾಗಿದ್ದು, ಗುಬ್ಬಿಯ ಹೆಸರಿಗೆ ಗುಬ್ಬಿ ಅಂತೆ ಇದ್ದು, ಪಕ್ಕದ ತಾಲೂಕುಗಳಿಗೆ ಕೊಡಿಸುವ ಅನುದಾನ ನಮಗೂ ಕೊಡಿಸಿ, ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಮನವಿ ಮಾಡಿದ ಅವರು, ಪತ್ನಿಯು ತುಮುಲ್ ನಿರ್ದೇಶಕರ ಸ್ಥಾನ ಚುನಾವಣೆಗೆ ನನ್ನ ವಿರೋಧ ಇದ್ದರೂ ಸಹ ನಿಂತು ಗೆದ್ದ ಬಳಿಕ ತಿಳಿಯಿತು.
ಕಾರ್ಯಕ್ರಮದಲ್ಲಿ ತುಮುಲ್ ನಿರ್ದೇಶಕರಾದ ಭಾರತಿ ಶ್ರೀನಿವಾಸ್, ಅಡಿಷನಲ್ ಎಸ್ಪಿ ಕರಿಯಪ್ಪ, ತಹಸೀಲ್ದಾರ್ ಆರತಿ ಬಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಂಜುಳಾ ದೇವಿ, ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಪ್ರಕಾಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್. ವೆಂಕಟೇಶ್, ಡಿವೈಎಸ್ಪಿ ಶೇಖರ್ ಸೇರಿದಂತೆ ಹಲವು ಮುಖಂಡರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ನಾರಾಯಣ ಹೃದಯಾಲಯ, ಕಿಡ್ವಾಯಿ ಆಸ್ಪತ್ರೆ, ಸುಚಿ ಆಸ್ಪತ್ರೆ, ಚಾಲುಕ್ಯ ಆಸ್ಪತ್ರೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಗುಬ್ಬಿ ಪಾಲ್ಗೊಂಡಿದ್ದವು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


