ತುಮಕೂರು: ದಲಿತ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನಂತರ ಹಲ್ಲೆ ನಡೆಸಿ ಕೊಲೆ ಮಾಡಿದ್ದ 21 ಮಂದಿ ಅಪರಾಧಿಗಳಿಗೆ ತುಮಕೂರು 3 ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
1) ರಂಗನಾಥ್ ಜಿ.ಎಸ್ ಬಿನ್ ಸುಬ್ಬಣ್ಣ, 2)ಮಂಜುಳ ಕೋಂ ರಂಗನಾಥ, 3)ರಾಜು @ ದೇವರಾಜು ಬಿನ್ ಅಪ್ಪಯ್ಯ 4)ಶ್ರೀನಿವಾಸ ಬಿನ್ ದೊಡ್ಡಮನೆ ರಾಮಯ್ಯ, 5)ಸ್ವಾಮಿ @ ಆನಂದಸ್ವಾಮಿ ಬಿನ್ ಗಂಗಣ್ಣ, 6)ವೆಂಕಟಸ್ವಾಮಿ ಬಿನ್ ಗಂಗಪ್ಪ, 7) ವೆಂಕಟೇಶ್ ಬಿನ್ ತಿಮ್ಮಣ್ಣ, 8) ನಾಗರಾಜು ಬಿನ್ ಸಿದ್ದರಾಮಶೆಟ್ಟಿ, 9)ರಾಜಪ್ಪ @ ರಾಮಯ್ಯ ಬಿನ್ ಸಿದ್ದರಾಮಶೆಟ್ಟಿ, 10)ಮೀಸೆ ಹನುಮಂತಯ್ಯ ಬಿನ್ ರಾಮಶೆಟ್ಟಿ, 11) ಗಂಗಾಧರ @ ಗಂಗಣ್ಣ ಬಿನ್ ಸುಬ್ಬಶೆಟ್ಟಿ, 12) ಸತ್ಯಪ್ಪ @ ಸತೀಶ ಬಿನ್ ನಂಜಪ್ಪ, 13)ನಂಜುಂಡಯ್ಯ ಬಿನ್ ನಂಜಪ್ಪ, 14) ಚಂದ್ರಶೇಖರ್ @ ಚಂದ್ರಯ್ಯ ಬಿನ್ ಕುರುಡ ಗಂಗಪ್ಪ, 15)ರಂಗಣ್ಣ @ ರಾಮಯ್ಯ ಬಿನ್ ಸಿದ್ದರಾಮಶೆಟ್ಟರು. 16) ಉಮೇಶ ಬಿನ್ ರಾಮಯ್ಯ, ಸುಮಾರು 40 ವರ್ಷ, ಜಿರಾಯ್ತಿ, ಗೋಪಾಲಪುರ , ಚಿಕ್ಕನಾಯಕನಹಳ್ಳಿ ತಾಲ್ಲೂಕ್, ತುಮಕೂರು ಜಿಲ್ಲೆ.17) ಬುಳ್ಳೆ ಹನುಮಂತಯ್ಯ ಬಿನ್ ಸಿದ್ದರಾಮಯ್ಯ, 18)ಚನ್ನಮ್ಮ @ ಚಿನ್ನಮ್ಮ ಕೋಂ ರಂಗಯ್ಯ ರಾಜಪ್ಪ . ಸುಮಾರು 45 ವರ್ಷ, ಜಿರಾಯ್ತಿ, ಗೋಪಾಲಪುರ, ಚಿಕ್ಕನಾಯಕನಹಳ್ಳಿ ತಾಲ್ಲೂಕ್, ತುಮಕೂರು ಜಿಲ್ಲೆ. 19) ಜಯಣ್ಣ @ ಜಯಕುಮಾರ್ @ ನರಸಿಂಗಯ್ಯ ಬಿನ್ ನರಸಿಂಹಯ್ಯ, 20)ಕೆ.ಜಿ.ಮಂಜು ಬಿನ್ ಜವರಪ್ಪ , 21) ಸ್ವಾಮಿ ಬಿನ್ ರಾಜಣ್ಣ ಸೇರಿದಂತೆ ಒಟ್ಟು 21 ಜನ ಆರೋಪಿಗಳಿಗೆ ಇಂದು ಜೀವಾವಧಿ ಶಿಕ್ಷೆ ಮತ್ತು 5,000 ದಂಡ ವಿಧಿಸಿ ಆದೇಶಿಸಿ ತೀರ್ಪು ನೀಡಿದೆ.
ಈ ಪ್ರಕರಣದ ಸಂಬಂದ ಹಂದನಕೆರೆ ಪೊಲೀಸ್ ಠಾಣಾ ಮೊನಂ:44/2010 ಕಲಂ:143,147,148,302 ರೆ/ವಿ 149 ಐಪಿಸಿ ಮತ್ತು 3(10).(1) ಎಸ್.ಸಿ/ಎಸ್.ಟಿ ಆಕ್ಟ್ -1989 ಪ್ರಕರಣ ದಾಖಲಾಗಿತ್ತು.
28.06.2010 ರಂದು ರಾತ್ರಿ ಸುಮಾರು 11:30 ಗಂಟೆಗೆ ಪಿರ್ಯಾದಿರವರಾದ ಕರಿಯಮ್ಮ ಕೋಂ ಕುಮಾರಯ್ಯ, 45 ವರ್ಷ, ಆದಿ ಕರ್ನಾಟಕ ಜನಾಂಗ, ಗೋಪಾಲಪುರ ಗ್ರಾಮ, ಚಿ.ನಾ.ಹಳ್ಳಿ ತಾಲ್ಲೂಕ್ ಇವರು ನೀಡಿದ ಅಖಿತ ಅಂಶವೇನೆಂದರೆ, ನನ್ನ ಅತ್ತಿಗೆ ಹೊನ್ನಮ್ಮರವರಿಗೆ ಸೇರಿದ ಮರಗಳನ್ನು ಊರಿನ ಕೆಲವರು ತೆಗೆದುಕೊಂಡು ಹೋಗಿರುವ ಬಗ್ಗೆ ಹೊನ್ನಮ್ಮರವರು ಹಂದನಕೆರೆ ಪೊಲೀಸ್ ಠಾಣಿಗೆ ದೂರು ನೀಡಿದ್ದರು. 28.06.2010 ರಂದು ಮಧ್ಯಾಹ್ನ ಸುಮಾರು 3 ಗಂಟೆ ಸಮಯಕ್ಕೆ ಹೊನ್ನಮ್ಮ ಹುಳಿಯಾರಿಗೆ ಹೋಗಿ ಸಂಜೆ 07:30 ಕ್ಕೆ ವಾಪಸ್ ಗೋಪಾಲಪುರಕ್ಕೆ ಬಂದಾಗ ಮೀನಮ್ಮ ಅವರ ಮನೆ ಮುಂದೆ ಆರೋಪಿಗಳು ಅಕ್ರಮ ಗುಂಪು ಕಟ್ಟಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ, ನಂತರ ಹಲ್ಲೆ ಮಾಡಿ ಅಲ್ಲಿಯೇ ಇದ್ದ ಬಾಕ್ಸ್ ಚರಂಡಿಗೆ ಎಳೆದು ಹೊನ್ನಮ್ಮಳ ಮೇಲೆ ಆರೋಪಿತರು ಕಲ್ಲುಗಳನ್ನು ತಲೆಯ ಮೇಲೆ ಹಾಗೂ ಹೊಟ್ಟೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದರು.
ಈ ಸಂಬಂಧ ಹಂದನಕೆರೆ ಪೊಲೀಸ್ ಠಾಣಾ ಮೊನಂ:44/2010 ಕಲಂ:143,147,148,302 ರೆ/ವಿ 149 ಐಪಿಸಿ ಮತ್ತು 3(10).(11) ಎಸ್.ಸಿ/ಎಸ್.ಟಿ ಆಕ್ಟ್ -1989 ರೀತ್ಯಾ ಹಂದನಕೆರೆ ಪೊಲೀಸ್ ಠಾಣೆಯ ಎ.ಎಸ್.ಐ ಗಂಗಾಧರಯ್ಯರವರು ಪ್ರಕರಣ ದಾಖಲು ಮಾಡಿದ್ದರು.
ತಿಪಟೂರು ಉಪವಿಭಾಗದ, ಪೊಲೀಸ್ ಉಪಾಧೀಕ್ಷಕರಾದ ಶಿವರುದ್ರಸ್ವಾಮಿ ತನಿಖೆ ಕೈಗೊಂಡು ಒಟ್ಟು 27 ಆರೋಪಿತರುಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ತುಮಕೂರಿನ 3 ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವು ಸ್ಟೇಷಲ್ ಸಿಸಿ 167/2010ರಲ್ಲಿ ವಿಚಾರಣೆ ನಡೆದಿದ್ದು, ಸದರಿ ಪ್ರಕರಣದಲ್ಲಿ 21 ಜನ ಆರೋಪಿತರುಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. 21 ಆರೋಪಿಗಳಲ್ಲಿ 19 ಜನ ಪುರುಷ ಆರೋಪಿತರುಗಳು ಹಾಗೂ ಇಬ್ಬರೂ ಮಹಿಳಾ ಆರೋಪಿಗಳಿದ್ದರು.
ಪ್ರಕರಣದ ವಿಚಾರಣೆಯನ್ನು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನಾಗೀರೆಡ್ಡಿ ನಡೆಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕಿ ಬಿ.ಎಸ್.ಜ್ಯೋತಿ ರವರು ವಾದ ಮಂಡನೆ ಮಾಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296