ತಿಪಟೂರು: ದಲಿತರು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಿದಾಗ ಸಮುದಾಯಕ್ಕಾಗಿ ಹೋರಾಡಿದ ಮಹನೀಯರ ಶ್ರಮಕ್ಕೆ ಸಾರ್ಥಕ ಫಲದೊರೆತಂತೆ ಎಂದು ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು
ತಾಲೂಕಿನ ಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟಿಸಿದ ಅವರು, ಪ್ರಸ್ತುತ ದಲಿತರಲ್ಲಿ ಸ್ವಾಭಿಮಾನದ ಬದುಕಿಗೆ ಶಿಕ್ಷಣ ಶಕ್ತಿ ನೀಡುತ್ತದೆ. ತಾವೂ ಶ್ರಮಪಟ್ಟು ಬದುಕುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದ ಅವರು ಸರ್ಕಾರ ಶೋಷಿತರು ಹಾಗೂ ತುಳಿತಕ್ಕೋಳಗಾದವರಿಗೆ ನೆರವಾಗುವ ಅಂತೋದಯದ ಆಶಯದೊಂದಿಗೆ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಎಲ್ಲರೂ ಚೌಟ್ರಿಗಳಲ್ಲಿ ಮದುವೆ ಮುಂಜ್ಜಿ ಶುಭಕಾರ್ಯಗಳನ್ನ ಮಾಡಲು ಶಕ್ತಿ ಇರುವುದಿಲ್ಲ ಸಮಾಜದಲ್ಲಿ ಸಣ್ಣ ಪುಟ್ಟ ಸಮುದಾಯಗಳನ್ನ ಗುರ್ತಿಸಿ ಸಮುದಾಯ ಭವನಗಳ ನಿರ್ಮಾಣ ಮಾಡಿಕೊಡುವ ಮೂಲಕ ಸಮುದಾಯದ ಚಟುವಟಿಕೆಗಳಿಗೆ ನೆರವಾಗುತ್ತಿದೆ ಎಂದರು.
ತಾಲೂಕಿನ ಬಹುತೇಕ ಪರಿಶಿಷ್ಠ ಜಾತಿ ಹಾಗೂ ವರ್ಗಗಳ ಸಮುದಾಯಗಳಿಗೆ ಸಮುದಾಯ ಭವನಕ್ಕೆ ಅನುದಾನ ನೀಡಲಾಗಿದೆ. ಕೆಲವು ಗ್ರಾಮಗಳಲ್ಲಿ ಭವನಗಳು ನಿರ್ಮಾಣವಾಗಿ ಸಾರ್ವಜನಿಕ ಉಪಯೋಗಕ್ಕೆ ದೊರೆತಿವೆ. ಇನ್ನೂ ಕೆಲ ಗ್ರಾಮಗಳಲ್ಲಿ ನಿವೇಶನ ಗುರ್ತಿಸಲಾಗುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ತಾಲೂಕು ಸಮಾಜಕಲ್ಯಾಣಧಿಕಾರಿ ದಿನೇಶ್ ಈಚನೂರು ಗ್ರಾಮಪಂಚಾಯ್ತಿ ಉಪಾಧ್ಯಕ್ಷರಾದ ಪುಷ್ಪಜಗದೀಶ್.ಸದಸ್ಯರಾದ ಉದಯ್ ಕುಮಾರ್.ಕಾಂತರಾಜು.ನವೀನ್ ಕುಮಾರ್.ಮುಖಂಡರಾದ ಗಿರೀಶ್.ಜಯಣ್ಣ.ಚಂದ್ರಪ್ಪ.ಗುತ್ತಿಗೆದಾರ ಡಿ.ಆರ್ ಬಸವರಾಜು ಮುಂತ್ತಾದವರು ಉಪಸ್ಥಿತರಿದರು.
ವರದಿ: ಆನಂದ ತಿಪಟೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5