ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಾರೆಹಳ್ಳಿ ದಲಿತ ಕಾಲೋನಿಯಲ್ಲಿ ಅಪರಾಧ ತಡೆ ಮಾಸಾಚರಣೆ ಮತ್ತು ದಲಿತರ ಕುಂದು ಕೊರತೆಯ ಬಗ್ಗೆ ಸಭೆ ನಡೆಯಿತು.
ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ರವರ ಅಧ್ಯಕ್ಷತೆಯಲ್ಲಿ ಕೋಳಾಲ ಪಿಎಸ್ ಐ ಮಹಾಲಕ್ಷ್ಮಮ್ಮ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಧಿಕಾರಿಗಳು, ದಲಿತರಿಗೆ ಯಾವುದೇ ರೀತಿಯ ತೊಂದರೆಯಾದರೂ ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು. ಬಾಲ್ಯ ವಿವಾಹ ತಡೆಗಟ್ಟಲು ಸಹಕರಿಸಬೇಕು, ಅಪರಿಚಿತ ವಾಹನಗಳು ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆಗೆ ವಾಹನದ ನಂಬರನ್ನು ತಿಳಿಸಬೇಕು ಇದರಿಂದ ಕಳ್ಳತನ ಪ್ರಕರಣವನ್ನು ಬೇಧಿಸಲು ಸುಲಭವಾಗುತ್ತದೆ. ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಮತ್ತು ವಾಹನದ ಇನ್ಸೂರೆನ್ಸ್ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಇರಬೇಕು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಹಲವಾರು ದಲಿತ ಮುಖಂಡರುಗಳು ಮತ್ತು ಪುರದಹಳ್ಳಿ ನರಸಿಂಹರಾಜು, ಕಾಳ ಗಾನ ಹಳ್ಳಿ ನರಸಿಂಹಯ್ಯ, ಮಧ್ಯ ವೆಂಕಟಾಪುರ ಗ್ರಾಮದ ಬೈಲಾಂಜನೇಯ, ತೀತಾ ಗ್ರಾಮದ ಲಿಂಗರಾಜು, ಪುಟ್ ಸಂದ್ರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ವಿದ್ಯಾರ್ಥಿಗಳು ಪೊಲೀಸ್ ಠಾಣಾ ಸಿಬ್ಬಂದಿಗಳು ಹಾಜರಿದ್ದರು.
ಸಿದ್ದರಾಜು ಟಿ.ಹೆಚ್., ಕೊರಟಗೆರೆ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700