ಧಾರವಾಡ: ರಾಜ್ಯದ ಮೊದಲ ಐಐಟಿ ಗ್ರೀನ್ ಕ್ಯಾಂಪಸ್ ನ್ನು ವಿದ್ಯಾಕಾಶಿ ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ.
852 ಕೋಟಿ ವೆಚ್ಚದಲ್ಲಿ 535 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಐಐಟಿ ಗ್ರೀನ್ ಕ್ಯಾಂಪಸ್ ನ್ನು ರಿಬ್ಬನ್ ಕಟ್ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.
ಹುಬ್ಬಳ್ಳಿ-ಧಾರವಾಡ ಜನರ ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ, ಕರ್ನಾಟಕದ ಪ್ರತಿ ವ್ಯಕ್ತಿ ಜೀವನ ಸಮೃದ್ಧಗೊಳಿಸುವ ಅವಕಾಶ ಸಿಕ್ಕಿದೆ. ಜಗದ್ಗುರು ಬಸವೇಶ್ವರರಿಗೆ ನನ್ನ ಪ್ರಣಾಮಗಳು. ಧಾರವಾಡ ಕರ್ನಾಟಕ ಮಾತ್ರವಲ್ಲ ಭಾರತದ ಜೀವಂತ ಪ್ರತಿಬಿಂಬ ಎಂದು ಹೇಳಿದರು.
ಪಂಡಿತ್ ಭೀಮಸೇನ್ ಜೋಶಿ, ದ.ರಾ.ಬೇಂದ್ರೆಯವರನ್ನು ಸ್ಮರಿಸಿದ ಪ್ರಧಾನಿ ಮೋದಿ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೂ ಧಾರವಾಡ ಕೊಡುಗೆ ಸಾಕಷ್ಟಿದೆ. ಬೆಂಗಳೂರು-ಮೈಸೂರು ಹೈವೆ ಉದ್ಘಾಟನೆ ನನ್ನ ಸೌಭಾಗ್ಯ. ಇತ್ತೀಚೆಗೆ ಶಿವಮೊಗ್ಗದಲ್ಲಿ ಏರ್ ಪೋರ್ಟ್ ಉದ್ಘಾಟಿಸಲಾಗಿದೆ. ಬೆಳಗಾವಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಧಾರವಾಡದಲ್ಲಿ ಐಐಟಿ ಲೋಕಾರ್ಪಣೆ ಮಾಡಲಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ವೇಗವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.
ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿದೆ 250 ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದೆ. ದೇಶದ ನಗರಗಳಿಗೆ ಆಧುನಿಕ ಸ್ಪರ್ಶ ನೀಡಿ ಅಭಿವೃದ್ಧಿ ಮಾಡಲಾಗಿದೆ. ಸಂಪರ್ಕ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಇಡೀ ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ತಾಯಿ ಇದ್ದಂತೆ ನಮ್ಮ ಭಾರತ ದೇಶ. ಕೆಲ ವರ್ಷಗಳ ಹಿಂದೆ ಲಂಡನ್ ನಲ್ಲಿ ಬಸವಣ್ಣನವರ ಮೂರ್ತಿ ಅನಾವರಣ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಈ ಭೂಮಿ 12ನೇ ಶತಮಾನದಲ್ಲೇ ಸಂಸತ್ ಭವನದ ಪರಿಕಲ್ಪನೆಯನ್ನು ನೀಡಿದೆ. ಅನುಭವ ಮಂಟಪ ಎಲ್ಲ ವರ್ಗದ ಜನರನ್ನು ಒಳಗೊಂಡಿತ್ತು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


