nammatumakuru

    Subscribe to Updates

    Get the latest creative news from FooBar about art, design and business.

    What's Hot

    ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಗೋಪಾಲಕೃಷ್ಣ ನೇಮಕ; ಸಂಘಟನೆಯ ಹೆಸರು ದುರುಪಯೋಗಪಡಿಸಿಕೊಂಡರೆ ಕ್ರಮದ ಎಚ್ಚರಿಕೆ

    March 25, 2026

    ಯುಗಾದಿ– ಶಿವರಾತ್ರಿಯಂದೂ ನಾನು ಮಾಂಸ ಸೇವನೆ ಮಾಡುತ್ತೇನೆ, ನನ್ನಿಷ್ಟ: ವಿಧಾನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

    March 25, 2026

    ಓದುವ ಹವ್ಯಾಸ ಜೊತೆಯಲ್ಲಿ ಕ್ರೀಡೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ: ಎಂ.ಪಿ.ಸೂರ್ಯ ಕುಮಾರ್

    March 25, 2026
    Facebook Twitter Instagram
    ಟ್ರೆಂಡಿಂಗ್
    • ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಗೋಪಾಲಕೃಷ್ಣ ನೇಮಕ; ಸಂಘಟನೆಯ ಹೆಸರು ದುರುಪಯೋಗಪಡಿಸಿಕೊಂಡರೆ ಕ್ರಮದ ಎಚ್ಚರಿಕೆ
    • ಯುಗಾದಿ– ಶಿವರಾತ್ರಿಯಂದೂ ನಾನು ಮಾಂಸ ಸೇವನೆ ಮಾಡುತ್ತೇನೆ, ನನ್ನಿಷ್ಟ: ವಿಧಾನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು
    • ಓದುವ ಹವ್ಯಾಸ ಜೊತೆಯಲ್ಲಿ ಕ್ರೀಡೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ: ಎಂ.ಪಿ.ಸೂರ್ಯ ಕುಮಾರ್
    • ಸಮಾಜ ಕಲ್ಯಾಣ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ: ಪರಿಶೀಲನೆ ಮಾಡದೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬಾರದು: ಯಗಚಿ ಕಟ್ಟೆ ರಾಘವೇಂದ್ರ ಒತ್ತಾಯ
    • ತಿಪಟೂರು: ಸಾರ್ವಜನಿಕ ಶೌಚಾಲಯಗಳಿಗೆ ಬೀಗ; ಬಯಲು ವಿಸರ್ಜನೆಗೆ ಮೊರೆ ಹೋದ ಜನತೆ
    • ತುಮಕೂರು: ಚಿರತೆ ದಾಳಿಗೆ 20 ಕುರಿಗಳು ಬಲಿ; ಗ್ರಾಮಸ್ಥರಲ್ಲಿ ಆತಂಕ
    • ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ
    • ಬೀದರ್: ಆನ್‌ ಲೈನ್ ಗೇಮ್ ಚಟಕ್ಕೆ ಬಲಿಯಾದ ಎಂಬಿಬಿಎಸ್ ವಿದ್ಯಾರ್ಥಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಧರ್ಮದ ಆಧಾರದ ಮೇಲೆ ಮಾತ್ರ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿದೆ: ಅಶೋಕ್ ಗೆಹ್ಲೋಟ್
    ರಾಜ್ಯ ಸುದ್ದಿ August 18, 2022

    ಧರ್ಮದ ಆಧಾರದ ಮೇಲೆ ಮಾತ್ರ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿದೆ: ಅಶೋಕ್ ಗೆಹ್ಲೋಟ್

    By adminAugust 18, 2022No Comments2 Mins Read
    ashok

    ಭಾರತೀಯ ಜನತಾ ಪಕ್ಷವು ಭಾರತ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಒಂದು ವೇಳೆ, ಭಾರತ ಹಿಂದೂ ರಾಷ್ಟ್ರವಾದರೆ ಇಂದು ಪಾಕಿಸ್ತಾನಕ್ಕೆ ಬಂದಿರುವ ಸ್ಥಿತಿಯೇ ನಾಳೆ ಭಾರತಕ್ಕೆ ಬರುತ್ತದೆ ಎಂದು ರಾಜಸ್ಥಾನ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಎಚ್ಚರಿಕೆ ನೀಡಿದ್ದಾರೆ.
    ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರಾಗಿ ಕೆಲಸ ಮಾಡುತ್ತಿರುವ ಅಶೋಕ್ ಗೆಹ್ಲೋಟ್, ಕೇವಲ ಧರ್ಮದ ಆಧಾರದ ಮೇಲೆ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿ ಸದಾ ಕಾಲ ಯತ್ನಿಸುತ್ತಿದೆ ಎಂದು ಕಿಡಿ ಕಾರಿದರು.
    ಬಿಜೆಪಿ ಆಡಳಿತದ ಗುಜರಾತ್ ರಾಜ್ಯಕ್ಕೆ 2 ದಿನಗಳ ಭೇಟಿಗೆ ಆಗಮಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಸಭೆ, ಸಮಾಲೋಚನೆ ನಡೆಸಿದರು. ಮುಂದಿನ 3 ತಿಂಗಳಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ಎದುರಾಗಲಿದ್ದು, ಸಿದ್ದತೆಯ ಕುರಿತು ಅಶೋಕ್ ಗೆಹ್ಲೋಟ್ ಪರಾಮರ್ಶೆ ನಡೆಸಿದರು. ಇದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ.

    ಕಾಂಗ್ರೆಸ್ ನಾಯಕರ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್ ಗೆಹ್ಲೋಟ್, ದೇಶಾದ್ಯಂತ ಬಿಜೆಪಿ ಸರ್ಕಾರವು ಹಲವು ಕಾರ್ಯಕರ್ತರು ಹಾಗೂ ಪತ್ರಕರ್ತರನ್ನು ಜೈಲಿಗೆ ತಳ್ಳಿದೆ. ಉಗ್ರ ಬಲಪಂಥೀಯ ವಾದವನ್ನು ಪ್ರೋತ್ಸಾಹಿಸುತ್ತಿದೆ. ಧರ್ಮದ ಆಧಾರದ ಮೇಲೆ ಮಾತ್ರ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದರು. ಬಿಜೆಪಿಗೆ ಯಾವುದೇ ಸಿದ್ಧಾಂತವಿಲ್ಲ, ನೀತಿ ನಿರೂಪಣೆ ಇಲ್ಲ, ಆಡಳಿತ ಮಾದರಿಯಂತೂ ಇಲ್ಲವೇ ಇಲ್ಲ ಎಂದು ಅಶೋಕ್ ಗೆಹ್ಲೋಟ್ ವಿಶ್ಲೇಷಿಸಿದ್ದಾರೆ.


    Provided by
    Provided by

    ಬಿಜೆಪಿಯು ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪ ತೊಟ್ಟಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಭಾರತ ದೇಶದ ಪರಿಸ್ಥಿತಿ ಇಂದಿನ ಪಾಕಿಸ್ತಾನದ ರೀತಿ ಆಗಲಿದೆ ಎಂದು ಅಶೋಕ್ ಗೆಹ್ಲೋಟ್ ಎಚ್ಚರಿಸಿದರು.
    ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡೋದು ಅತಿ ಸುಲಭ. ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕೂಡಾ ಇದೇ ನೀತಿಯನ್ನು ಅನುಸರಿಸುತ್ತಿದ್ದ ಎಂದು ನೆನಪಿಸಿದ ಅಶೋಕ್ ಗೆಹ್ಲೋಟ್, ಗುಜರಾತ್ ಮಾದರಿಯ ನೆಪದಲ್ಲಿ ಬಿಜೆಪಿ ಜನರಿಗೆ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.

    ಇನ್ನು ಗುಜರಾತ್‌ನಲ್ಲಿ 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಗೆಲುವಿನ ಸನಿಹದಲ್ಲಿ ಇದ್ದೆವು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಖಾಡಕ್ಕೆ ಇಳಿದು ಬಾಲಿವುಡ್ ನಟನ ರೀತಿ ಪ್ರಚಾರ ಮಾಡಿದರು. ದುರಾದೃಷ್ಟವಶಾತ್ ನಾವು ಸೋಲಬೇಕಾಯ್ತು ಎಂದು ಅಶೋಕ್ ಗೆಹ್ಲೋಟ್ ಹೇಳಿದರು.

    ಹಿಂದೂರಾಷ್ಟ್ರ ಮಾಡುತ್ತೇವೆ ಎಂದು ಬೊಗಳೆ ಬಿಡಲಾಗಿದೆ, ಬಿಹಾರದಿಂದ ಬಿಜೆಪಿಗೆ ತಿರುಮಂತ್ರ ಶುರುವಾಗಿದೆ: ಮಧು ಬಂಗಾರಪ್ಪ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ತಿರುಚಿದ ಪ್ರಧಾನಿ ನರೇಂದ್ರ ಮೋದಿ, ತಮ್ಮನ್ನು ಕಾಂಗ್ರೆಸ್ ನಾಯಕರು ನೀಚ ವ್ಯಕ್ತಿ ಎಂದು ಜರಿದರು ಎಂಬ ಹೇಳಿಕೆ ನೀಡಿ ಜನರ ಸಹಾನುಭೂತಿಯನ್ನು ಗಿಟ್ಟಿಸಿದರು. ಕಾಂಗ್ರೆಸ್ ಸೋಲಲು ಇದೇ ಕಾರಣವಾಯ್ತು ಎಂದು ಅಶೋಕ್ ಗೆಹ್ಲೋಟ್ ವಿಶ್ಲೇಷಿಸಿದರು.

    2017ರ ಹೊತ್ತಿಗಾಗಲೇ ಬಿಜೆಪಿಯ ಅಭಿವೃದ್ಧಿ ಮಾದರಿ ಕುರಿತು ಜನರು ವ್ಯಂಗ್ಯವಾಡುತ್ತಿದ್ದರು. ಆದರೆ, ಪ್ರಧಾನಿ ಮೋದಿ ಬಾಲಿವುಡ್ ನಟನಂತೆ ವರ್ತಿಸಿದರು. ‘ನಾನೇ ಅಭಿವೃದ್ಧಿ’ ಎಂಬ ಘೋಷ ವಾಕ್ಯದೊಂದಿಗೆ ಸೀಪ್ಲೇನ್ ಬಳಸಿ ನದಿಯಲ್ಲಿ ಇಳಿದು ಚುನಾವಣಾ ಪ್ರಚಾರ ಮಾಡಿದರು ಎಂದು ಗೆಹ್ಲೋಟ್ ಹೇಳಿದರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

    admin
    • Website

    Related Posts

    ಯುಗಾದಿ– ಶಿವರಾತ್ರಿಯಂದೂ ನಾನು ಮಾಂಸ ಸೇವನೆ ಮಾಡುತ್ತೇನೆ, ನನ್ನಿಷ್ಟ: ವಿಧಾನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

    March 25, 2026

    16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ: ಶೀಘ್ರದಲ್ಲೇ ಸಮಗ್ರ ಮಾರ್ಗಸೂಚಿ ಪ್ರಕಟ: ಸಚಿವ ಮಧು ಬಂಗಾರಪ್ಪ

    March 24, 2026

    ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸುತ್ತಾರೆ: ಸದನದಲ್ಲಿ ಸಚಿವ ಜಮೀರ್ ಅಹ್ಮದ್ ಘೋಷಣೆ

    March 24, 2026

    Comments are closed.

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಗೋಪಾಲಕೃಷ್ಣ ನೇಮಕ; ಸಂಘಟನೆಯ ಹೆಸರು ದುರುಪಯೋಗಪಡಿಸಿಕೊಂಡರೆ ಕ್ರಮದ ಎಚ್ಚರಿಕೆ

    March 25, 2026

    ಕೊರಟಗೆರೆ: ತುಮಕೂರು ಜಿಲ್ಲೆಯ ಭೀಮ್ ಆರ್ಮಿ ಸಂಘಟನೆಯ ನೂತನ ಜಿಲ್ಲಾಧ್ಯಕ್ಷರಾಗಿ ಕೊರಟಗೆರೆ ಗೋಪಾಲಕೃಷ್ಣ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಪಟ್ಟಣದ ಪ್ರವಾಸಿ…

    ಯುಗಾದಿ– ಶಿವರಾತ್ರಿಯಂದೂ ನಾನು ಮಾಂಸ ಸೇವನೆ ಮಾಡುತ್ತೇನೆ, ನನ್ನಿಷ್ಟ: ವಿಧಾನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

    March 25, 2026

    ಓದುವ ಹವ್ಯಾಸ ಜೊತೆಯಲ್ಲಿ ಕ್ರೀಡೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ: ಎಂ.ಪಿ.ಸೂರ್ಯ ಕುಮಾರ್

    March 25, 2026

    ಸಮಾಜ ಕಲ್ಯಾಣ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ: ಪರಿಶೀಲನೆ ಮಾಡದೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬಾರದು: ಯಗಚಿ ಕಟ್ಟೆ ರಾಘವೇಂದ್ರ ಒತ್ತಾಯ

    March 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.