ತುಮಕೂರು: ಕುಂಭಮೇಳದ ಒಂದು ನಗ್ನ ಸತ್ಯ ಏನು ಅಂದ್ರೆ, ಬೆಳಗಾವಿಯಿಂದ ಹೋಗಿದ್ದಂತಹ 60 ಜನರಲ್ಲಿ 4 ಜನ ಪ್ರಾಣ ತೆತ್ತರು. ಕಾಲ್ತುಳಿತದಿಂದ ಪ್ರಾಣಬಿಟ್ರು. ಅವರ ಬಾಡಿಗಳನ್ನ ಊರಿಗೆ ಕಳುಹಿಸಬೇಕು ಅಂತೇಳಿ, ಡೆಲ್ಲಿಯಲ್ಲಿದ್ದ ನಾನು ಪ್ರಯಾಗರಾಜ್ ಗೆ ಹೋಗಿದ್ದೆ. ಅವಾಗ ಬಾಡಿಗಳನ್ನ ಕಸದ ಹಾಕೋ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ರು ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ತುಮಕೂರಿನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೃತದೇಹಗಳನ್ನು ಶಾಸ್ತ್ರೋಕ್ತವಾಗಿ ಬೆಳಗಾವಿಯ ಅವರ ಸಂಬಂಧಿಕರಿಗೆ ತಲುಪಿಸುವ ಕೆಲಸ ಮಾಡಿದ್ವಿ. ಇಂತಹ ಪ್ರಯಾಗರಾಜ್ ನಲ್ಲಿ ಕುಂಭಮೇಳ ಮಾಡಬೇಕು ಅಂದ್ರೆ, ಲಾ ಅಂಡ್ ಆರ್ಡರ್ ನಿರ್ವಹಣೆ ಆಯಾ ರಾಜ್ಯಕ್ಕೆ ಸೇರಿದ್ದು, ಕಾಲ್ತುಣಿತಕ್ಕೆ ಹೊಣೆಗಾರರು ಯಾರು ಅಂದ್ರೆ ಅಲ್ಲಿನ ಸರ್ಕಾರ ಎಂದರು.
ಆ ಜವಾಬ್ದಾರಿಯನ್ನ ಅಲ್ಲಿನ ಸರ್ಕಾರನೇ ಹೊರಬೇಕು. ಆದರೆ ಹೊರ್ತಿರಲಿಲ್ಲ. ಸಂವಿಧಾನಬದ್ದವಾಗಿ ಆ ರಾಜ್ಯದಲ್ಲಿ ಕೆಲಸ ಆಗ್ತಿಲ್ಲ ಅನ್ನೊ ಭಾವನೆ ಬರುತ್ತೆ. ಇವತ್ತು ಎಲ್ಲೋ ಒಂದು ಕಡೆಗೆ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ರೆ ಪಾಪಗಳು ಕಳೆದೊಗ್ತದೆ ಅನ್ನೋ ಭಾವನೆ ಇರುತ್ತೆ. ಅದು ಅವರವರ ನಂಬಿಕೆ. ನಂಬಿಕೆಯ ವಿರುದ್ಧ ನಾವು ಮಾತಾಡೋಕೆ ಬರಲ್ಲ. ವ್ಯವಸ್ಥೆ ಮಾಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರಗಳು ಹೊರಬೇಕು. ಲಾ ಅಂಡ್ ಆರ್ಡರ್ ಫೆಲ್ಯೂರ್ ಎದ್ದು ಕಾಣ್ತಿದೆ ಎಂದರು.
ಅಲ್ಲಿ ಬ್ಯಾಕ್ಟೀರಿಯಾ ಕಂಟಾಮೇಷನ್ ಆಗಿದೆ. ಆ ನೀರು ಸ್ನಾನ ಮಾಡಲು ಯೋಗ್ಯವಲ್ಲ ಅನ್ನೋ ಮಾತು ಮಾಧ್ಯಮದಲ್ಲಿ ಬಂದಿದೆ ಎಂದು ಅವರು ಹೇಳಿದರು.
ನಮ್ಮಲ್ಲಿ ಒಂದು ಗಾದೆ ಮಾತಿದೆ. ಗಂಗಾ ಪಾನಿ, ತುಂಬಾ ಸ್ನಾನ ಎಂಬ ಗಾದೆ ಇದೆ. ಅಂದ್ರೆ ಸ್ನಾನ ಮಾಡೋಕೆ ತುಂಗೆ ಪವಿತ್ರ. ಕುಡಿಯೋದಕ್ಕೆ ಗಂಗೆ ನೀರು ಒಳ್ಳೆದು. ಕಾಶಿ, ಗಂಗೆಯಿಂದ ಬಂದ ನೀರು ಪವಿತ್ರ ಎನ್ನುವಂತ ನಂಬಿಕೆ ಹಿಂದೂಗಳಲ್ಲಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4