ಬ್ರಿಟಿಷ್ ರಾಜಕುಮಾರಿ ಡಯಾನಾ ಅವರ ಪ್ರಸಿದ್ಧ ನೇರಳೆ ಗೌನ್ ಹರಾಜು ಮಾಡಲು ನಿರ್ಧರಿಸಲಾಗಿದೆ. ಡಯಾನಾ ಸತ್ತು 25 ವರ್ಷಗಳಾದರೂ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಫ್ಯಾಷನ್ ಲೋಕ ಸೇರಿದಂತೆ ಡಯಾನಾ ಇನ್ನೂ ಚರ್ಚೆಯ ಬಿಸಿ ವಿಷಯವಾಗಿದೆ. ಇದೀಗ ಡಯಾನಾ ಮತ್ತೆ ಸುದ್ದಿಯಲ್ಲಿದ್ದಾರೆ.
ಕೊನೆಯ ಫೋಟೋಶೂಟ್ ನಲ್ಲಿ ಧರಿಸಿದ್ದ ಗೌನ್ ಡಯಾನಾ ಅವರನ್ನು ಮತ್ತೆ ಟಾಕ್ ಆಫ್ ಟೌನ್ ಮಾಡುತ್ತಿದೆ. ಕೊನೆಯ ಫೋಟೋ ಶೂಟ್‌ನಲ್ಲಿ ಡಯಾನಾ ಡೀಪ್ ಪರ್ಪಲ್ ಸಿಲ್ಕ್ ವೆಲ್ವೆಟ್ ಡ್ರೆಸ್ ಧರಿಸಿದ್ದರು.ಫ್ಯಾಷನ್ ಲೋಕದ ಲೇಟೆಸ್ಟ್ ಸುದ್ದಿ ಏನೆಂದರೆ ಈ ಗೌನ್ ಹರಾಜಾಗಿದೆ.
ಈ ಬಾಲ್ ಗೌನ್ ಅನ್ನು ಬ್ರಿಟಿಷ್ ಡಿಸೈನರ್ ವಿಕ್ಟರ್ ಎಡೆಲ್‌ಸ್ಟೈನ್ ವಿನ್ಯಾಸಗೊಳಿಸಿದ್ದಾರೆ. ವಿಕ್ಟರ್ಸ್ ಫಾಲ್ 1989 ರ ಸಂಗ್ರಹದ ಭಾಗವಾಗಿರುವ ಈ ಗೌನ್ ಧರಿಸಿ ಡಯಾನಾ 1991 ರ ಭಾವಚಿತ್ರಕ್ಕೆ ಪೋಸ್ ನೀಡಿದರು. 1997 ರ ವ್ಯಾನಿಟಿ ಫೇರ್ ಫೋಟೋ ಶೂಟ್‌ನಲ್ಲಿ ಡಯಾನಾ ಈ ಉಡುಪಿನಲ್ಲಿ ಬೆರಗುಗೊಳಿಸಿದರು. ಸಾಯುವ ಮುನ್ನ ಡಯಾನಾ ಅವರ ಕೊನೆಯ ಫೋಟೋ ಶೂಟ್ ಇದಾಗಿತ್ತು.
Sotheby’s Action House ಜನವರಿ 27 ರಂದು ಹರಾಜನ್ನು ಆಯೋಜಿಸುತ್ತಿದೆ. 65 ಲಕ್ಷದಿಂದ 97 ಲಕ್ಷದವರೆಗೆ ಗೌನ್ ಮಾರಾಟವಾಗುವ ನಿರೀಕ್ಷೆಯನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ. ಸೋಥೆಬಿಯ ಗ್ಲೋಬಲ್ ಡೈರೆಕ್ಟರ್ ಕ್ರಿಸ್ಟಿನಾ ವಾಕರ್ ಹೇಳಿದರು: “ಡಯಾನಾ ಅವರ ಕಾಲಾತೀತ ಸೌಂದರ್ಯ ಮತ್ತು ಗಾಂಭೀರ್ಯವು ಈ ಉಡುಪಿನಲ್ಲಿ ಪ್ರತಿಫಲಿಸುತ್ತದೆ.”
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy