ಯಾದಗಿರಿ: ಎಲ್ಲಾ ಸಮುದಾಯದವರು ಡಿಸಿಎಂ ಕೇಳುವುದರಲ್ಲಿ ತಪ್ಪೇನಿದೆ? ಇನ್ನೂ ಮೂರು ಯಾಕೆ ಐವತ್ತು ಉಪಮುಖ್ಯಮಂತ್ರಿ ಮಾಡಲಿ. ಅಂತಿಮವಾಗಿ ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.
ಮೂರು ಡಿಸಿಎಂ ಸ್ಥಾನಕ್ಕೆ ಸಚಿವ ಕೆ.ಎನ್.ರಾಜಣ್ಣ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಡಿಸಿಎಂ ಸ್ಥಾನ ಕೊಡಬೇಕೆಂಬ ವಿಚಾರವಾಗಿ ಮಾತನಾಡಿದ ಅವರು, ಯಾಕೆ ಉಪಮುಖ್ಯಮಂತ್ರಿ, ಸಿಎಂ ಸ್ಥಾನವನ್ನು ಕೊಡಬಾರದಾ? ಹಿಂದೆ ನಮ್ಮ ಭಾಗದವರೆ ಕಾಂಗ್ರೆಸ್ನಿಂದ ಇಬ್ಬರು ಸಿಎಂ ಆಗಿದ್ದಾರೆ ಎಂದರು.


