ಪಂಜಾಬ್: ಜಲಂಧರ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಲ್ಲಿದ್ದ ದಲ್ಬೀರ್ ಸಿಂಗ್ ಅವರ ಮೃತದೇಹವನ್ನು ಡಿಸೆಂಬರ್ 31 ಮತ್ತು ಜನವರಿ 1ರ ಮಧ್ಯರಾತ್ರಿ ಬಸ್ತಿ ಬಾವಾ ಖೇಲ್ ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಪೊಲೀಸ್ ಅಧಿಕಾರಿಯ ತಲೆಯ ಮೇಲೆ ಗಾಯದ ಗುರುತುಗಳಿವೆ.ನಾವು ಹತ್ತಿರದ ಪ್ರದೇಶಗಳಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಜಲಂಧರ್ ಡಿಸಿಪಿ-1 ಬಲ್ವಿಂದರ್ ಸಿಂಗ್ ರಾಂಧವಾ ಅವರು ತಿಳಿಸಿದ್ದಾರೆ.


