ಶಿರಾ: ತಾಲ್ಲೂಕಿನಲ್ಲಿ ಮೈಕ್ರೋಫೈನಾನ್ಸ್ ಸಾಲದ ಕಿರುಕುಳಕ್ಕೆ ಸಂಬಂಧಿಸಿದ ದುರ್ಘಟನೆ ನಡೆದಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ರೇಷ್ಮಾ ಕೆ.ಎಸ್. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ, ಆ ಮಕ್ಕಳ ಗೋಳು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಒಂದು ಕುಟುಂಬ ತನ್ನ ಪ್ರಿಯ ವ್ಯಕ್ತಿಯನ್ನು ಕಳೆದುಕೊಳ್ಳುವುದು ತುಂಬಾ ದುಃಖಕರ. ನಾನು ಎಲ್ಲರಿಗೂ ಈ ಸಂದೇಶ ನೀಡಲು ಬಯಸುತ್ತೇನೆ, ‘ನೀವು ಸಾಲ ಮಾಡುವಾಗ ಇರುವ ಧೈರ್ಯ, ಅದನ್ನು ತೀರಿಸುವಾಗಲೂ ಇರಬೇಕು. ಯಾವಾಗಲೂ ಪರ್ಯಾಯಗಳಿವೆ. ಯಾವುದೇ ಕಾರಣಕ್ಕೂ ಎದೆಗುಂದಬೇಡಿ” ಎಂದರು.
ಸಾಲದ ಬಾಧೆಯಿಂದ ಅಥವಾ ಯಾರಾದರೂ ಕಿರುಕುಳ ನೀಡಿದರೆ, ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿ, ಎಂದು ಅವರು ಸಾರ್ವಜನಿಕರನ್ನು ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4