nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗುಬ್ಬಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ.ವಿ.ಜಿ.ಕುಮಾರ್

    June 19, 2026

    ನೂತನ ನಂದಿನಿ ಕ್ಷೀರ ಮಳಿಗೆ ಉದ್ಘಾಟನೆ: ರೈತರಿಗೆ ಮತ್ತಷ್ಟು ಲಾಭದಾಯಕವಾಗಲಿದೆ: ಎಸ್.ಆರ್.ಗೌಡ

    June 19, 2026

    ಅಕ್ಕಿರಾಂಪುರ ಸಂತೆ ಮೈದಾನ ಹಾಗೂ ಕೆಬಿಜಿವಿ ವಿದ್ಯಾರ್ಥಿ ನಿಲಯ ಪರಿಶೀಲನೆ ನಡೆಸಿದ ಇಒ ಅಪೂರ್ವ ಸಿ.

    June 19, 2026
    Facebook Twitter Instagram
    ಟ್ರೆಂಡಿಂಗ್
    • ಗುಬ್ಬಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ.ವಿ.ಜಿ.ಕುಮಾರ್
    • ನೂತನ ನಂದಿನಿ ಕ್ಷೀರ ಮಳಿಗೆ ಉದ್ಘಾಟನೆ: ರೈತರಿಗೆ ಮತ್ತಷ್ಟು ಲಾಭದಾಯಕವಾಗಲಿದೆ: ಎಸ್.ಆರ್.ಗೌಡ
    • ಅಕ್ಕಿರಾಂಪುರ ಸಂತೆ ಮೈದಾನ ಹಾಗೂ ಕೆಬಿಜಿವಿ ವಿದ್ಯಾರ್ಥಿ ನಿಲಯ ಪರಿಶೀಲನೆ ನಡೆಸಿದ ಇಒ ಅಪೂರ್ವ ಸಿ.
    • ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ರೋಟರಿ ಸಂಸ್ಥೆ ಮಹತ್ವದ ಹೆಜ್ಜೆ: ತಹಶೀಲ್ದಾರ್ ಮಂಜುನಾಥ್ ಕೆ.
    • ಕೊರಟಗೆರೆ: ಹೃದಯಾಘಾತದಿಂದ ಕೆಎಸ್‌ ಆರ್‌ ಪಿ ಎಎಸ್‌ ಐ ಎನ್.ಜಿ. ಪವಾರ್ ನಿಧನ
    • ಸರಗೂರು: ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಚಾಮಲಾಪುರ ಸಿ.ಕೆ.ಗಿರೀಶ್ ಆಯ್ಕೆ
    • ಬೀದರ್: ಕರ್ತವ್ಯ ಲೋಪ, ದುರ್ನಡತೆ ಆರೋಪ; ಒಂದೇ ದಿನ ಇಬ್ಬರು ಪಿಡಿಒ ಅಮಾನತು!
    • ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿಗಾಗಿ ಮಹಿಳೆಯರ ಪರದಾಟ: ಅಧಿಕಾರಿಗಳ ವಿರುದ್ಧ ಆಕ್ರೋಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತಾಯಿ, ಗರ್ಭಿಣಿ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಪ್ರಕರಣದ ಅಪರಾಧಿಗೆ ಮರಣ ದಂಡನೆ
    ಜಿಲ್ಲಾ ಸುದ್ದಿ November 28, 2024

    ತಾಯಿ, ಗರ್ಭಿಣಿ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಪ್ರಕರಣದ ಅಪರಾಧಿಗೆ ಮರಣ ದಂಡನೆ

    By adminNovember 28, 2024No Comments1 Min Read
    mysore

    Provided by
    Provided by

    ಸರಗೂರು:  ತಾಯಿ, ಗರ್ಭಿಣಿ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳ ಕೊಲೆ ಪ್ರಕರಣದ ಅಪರಾಧಿಗೆ ಮೈಸೂರಿನ 5ನೇ ಅಧಿಕ ಜಿಲ್ಲಾ ಸೆಷನ್‌ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ತಾಲೂಕಿನ ಕೊತ್ತೇಗಾಲ ಗ್ರಾಪಂ ವ್ಯಾಪ್ತಿಯ ಚಾಮೇಗೌಡನಹುಂಡಿ ಗ್ರಾಮದ ಮಣಿಕಂಠ ಸ್ವಾಮಿ ಎಂಬಾತನೇ ಮರಣದಂಡನೆ ಗುರಿಯಾದವ. ಈತ ವಿಶೇಷಚೇತನನಾಗಿದ್ದು, ತನ್ನ ಹೆಂಡತಿಯ ಶೀಲ ಶಂಕಿಸಿ 2021ರ ಏಪ್ರಿಲ್ 28ರಂದು ತನ್ನ ಮನೆಯಲ್ಲೇ ಕೊಲೆ ಮಾಡಿದ್ದ. ಹೆಂಡತಿ ಗಂಗೆ, ತಾಯಿ ಕೆಂಪಾಜ್ಜಮ್ಮ ಹಾಗೂ 4 ವರ್ಷದ ಹಾಗೂ ಒಂದೂವರೆ ವರ್ಷದ ಇಬ್ಬರು ಗಂಡು ಮಕ್ಕಳನ್ನು ಹತ್ಯೆ ಮಾಡಿದ್ದ.

    ಕೊಲೆಯಾದ ಪತ್ನಿಯು ಆ ಸಂದರ್ಭದಲ್ಲಿ ತುಂಬು ಗರ್ಭಿಣಿಯಾಗಿದ್ದಳು. ಈ ಎಲ್ಲರನ್ನು ರಾತ್ರಿ ಮಲಗಿದ್ದ ವೇಳೆ ತನ್ನ, ಅಂಗವಿಕಲ ಸಾಧನದಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ಸರಗೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಈ ಸಂಬಂಧ ಪ್ರಕರಣ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಸಾಕ್ಷ್ಯಾಧಾರಗಳನ್ನ ಪರಿಶೀಲಿಸಿದ ನ್ಯಾಯಾಧೀಶರಾದ ಗುರುರಾಜ್‌ ಸೋಮಕ್ಕಳವರ್‌, ಮಣಿಕಂಠ ಸ್ವಾಮಿಯು ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಆರೋಪಿಯನ್ನು ಅಪರಾಧಿಯೆಂದು ತೀರ್ಮಾನಿಸಿ, ಮರಣ ದಂಡನೆ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

    ಅಲ್ಲದೆ, ಮೃತಳ ತಾಯಿ ಹಾಗೂ ಆರೋಪಿಯ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಲು ಪ್ರಕರಣವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ. ಇ. ಯೋಗೇಶ್ವರ ವಾದ ಮಂಡಿಸಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಸರಗೂರು: ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಚಾಮಲಾಪುರ ಸಿ.ಕೆ.ಗಿರೀಶ್ ಆಯ್ಕೆ

    June 19, 2026

    ಬೀದರ್: ಕರ್ತವ್ಯ ಲೋಪ, ದುರ್ನಡತೆ ಆರೋಪ; ಒಂದೇ ದಿನ ಇಬ್ಬರು ಪಿಡಿಒ ಅಮಾನತು!

    June 19, 2026

    ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿಗಾಗಿ ಮಹಿಳೆಯರ ಪರದಾಟ: ಅಧಿಕಾರಿಗಳ ವಿರುದ್ಧ ಆಕ್ರೋಶ

    June 19, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಗುಬ್ಬಿ

    ಗುಬ್ಬಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ.ವಿ.ಜಿ.ಕುಮಾರ್

    June 19, 2026

    ಗುಬ್ಬಿ: ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ವಿಜಿ ಕುಮಾರಗೆ ಗುಬ್ಬಿ ತಾಲ್ಲೂಕು ಕಾಡುಗೊಲ್ಲ ಸಮುದಾಯದ ಮುಖಂಡ ಕಂಬೇರಹಟ್ಟಿ ಕೆ.ಎಸ್ ನಾಗರಾಜ್…

    ನೂತನ ನಂದಿನಿ ಕ್ಷೀರ ಮಳಿಗೆ ಉದ್ಘಾಟನೆ: ರೈತರಿಗೆ ಮತ್ತಷ್ಟು ಲಾಭದಾಯಕವಾಗಲಿದೆ: ಎಸ್.ಆರ್.ಗೌಡ

    June 19, 2026

    ಅಕ್ಕಿರಾಂಪುರ ಸಂತೆ ಮೈದಾನ ಹಾಗೂ ಕೆಬಿಜಿವಿ ವಿದ್ಯಾರ್ಥಿ ನಿಲಯ ಪರಿಶೀಲನೆ ನಡೆಸಿದ ಇಒ ಅಪೂರ್ವ ಸಿ.

    June 19, 2026

    ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ರೋಟರಿ ಸಂಸ್ಥೆ ಮಹತ್ವದ ಹೆಜ್ಜೆ: ತಹಶೀಲ್ದಾರ್ ಮಂಜುನಾಥ್ ಕೆ.

    June 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.