ಸರಗೂರು: ಸಾಲ ಬಾಧೆಗೆ ಹೆದರಿ ಮನನೊಂದ ರೈತಯೊಬ್ಬರು ತುಂಬಸೋಗೆ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ದಂದು ಬೆಳಕಿಗೆ ಬಂದಿದೆ.
ತಾಲೂಕಿನ ಮುಳ್ಳೂರು ಗ್ರಾಮ ನಿವಾಸಿ ಚನ್ನನಾಯಕ ಎಂಬುವರು ಮಗನಾದ ಗೋವಿಂದನಾಯಕ (50) ವರ್ಷದ ಮೃತಪಟ್ಟಿರುವ ವ್ಯಕ್ತಿ.
ಗೋವಿಂದನಾಯಕ ಎಂಬುವನು ಸುಮಾರು 25 ವರ್ಷಗಳ ಹಿಂದೆ ಹೆಗ್ಗಡಪುರ ಗ್ರಾಮದಲ್ಲಿ ವಾಸವಾಗಿದ್ದು.ಇವನ್ನು ಕೆಲಸ ಮುಗಿಸಿಕೊಂಡು ಜಾನುವಾರುಗಳಿಗೆ 8 ಗಂಟೆ ಸಮಯಕ್ಕೆ ಹುಲ್ಲನ್ನು ತರುತ್ತಾನೆ ಎಂದು ಹೇಳಿ ಹೊರಗೆ ಹೋದವರು 11 ಗಂಟೆಯಾದರೂ ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದರು.
ಆದರೆ ನೆರವಾಗಿ ತಾಲೂಕಿನ ಸಮೀಪದ ತುಂಬಸೋಗೆ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಹೊಳೆಯ ಅಲ್ಲಿಂದ ತನ್ನ ಸ್ಕೂಟರ್ ನಲ್ಲಿ ತುಂಬಸೋಗೆ ಗ್ರಾಮದಲ್ಲಿರುವ ಸೇತುವೆ ಬಳಿ ತೆರಳಿದ ಅವರು, ಸೇತುವೆಯಲ್ಲಿಯೇ ಸ್ಕೂಟರ್ ನಿಲ್ಲಿಸಿ, ಮೇಲಿಂದ ಹೊಳೆಗೆ ಹಾರಿದ್ದರು ಎಂದು ತಿಳಿದುಬಂದಿದೆ.
ಕಬಿನಿ ಹೊಳೆಯ ಸೇತುವೆಯಿಂದ ಹೊಳೆಗೆ ಹಾರಿ ಕಬಿನಿ ಜಲಾಶಯದ ತುಂಬಸೋಗೆ ಸೇತುವೆಯಿಂದ ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೊಳೆಯ ದಡದಲ್ಲಿ ಇದ್ದ ಸಾರ್ವಜನಿಕರು ಹಾಗೂ ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸರಗೂರು ಪೋಲಿಸ್ ಠಾಣೆಯ ಪೊಲೀಸರು ತಕ್ಷಣ ಎಚ್.ಡಿ.ಕೋಟೆ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ದೋಣಿ ಮೂಲಕ ಮಂಗಳವಾರ ಹುಡುಕಾಟ ನಡೆಸಿದರು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ. ನಂತರ ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನ ವರಿಗೆ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ವೇಳೆ ಇಟ್ನ ಗ್ರಾಮದ ಮಾರಮ್ಮನ ದೇವಸ್ಥಾನ ಬಳಿ ಹೊಳೆಯ ನೀರಿನಲ್ಲಿ ದೇಹ ಪತ್ತೆಯಾಗಿದೆ.
ಮೃತಪಟ್ಟ ವ್ಯಕ್ತಿ ಬ್ಯಾಂಕ್ ಮತ್ತು ಕೈ ಸಾಲ ಮಾಡಿಕೊಂಡಿದ್ದರು. ಸಾಲದ ಹಿನ್ನೆಲೆ ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹವನ್ನು ಸಮುದಾಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ ಎಂದು ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಹಾಗೂ ಉಪ ನಿರೀಕ್ಷಕ ಆರ್. ಕಿರಣ್ ತಿಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC