ಚಿಕ್ಕಮಗಳೂರು: ಇ–ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ಮತ್ತಷ್ಟು ಹಣ ಪೀಕಲು ಪ್ಲಾನ್ ಮಾಡಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಚಿಕ್ಕಮಗಳೂರು ನಗರಸಭೆ ವಾರ್ಡ್ 2ರ ಬಿಲ್ ಕಲೆಕ್ಟರ್ ಪ್ರದೀಪ್ ಸಿಕ್ಕಿಬಿದ್ದಿದ್ದಾನೆ. ಸದಾಶಿವಮೂರ್ತಿ ಎಂಬುವವರ ಬೈಪಾಸ್ ರಸ್ತೆಯ ಜಾಗದ ಇ–ಸ್ವತ್ತು ಮಾಡಿಕೊಡಲು ಚಿಕ್ಕಮಗಳೂರು ನಗರಸಭೆ ವಾರ್ಡ್2 ಬಿಲ್ ಕಲೆಕ್ಟರ್ ಪ್ರದೀಪ್ ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾನೆ.
ಸದಾಶಿವಮೂರ್ತಿ ಮಗ ರಾಕೇಶ್ ನೀಡಿದ ದೂರಿನ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಲೋಕಾ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಮಲ್ಲಿಕಾರ್ಜುನ ನೇತೃತ್ವದ ತಂಡ ಪ್ರದೀಪ್ ನನ್ನು ನಗರಸಭೆ ಕಚೇರಿ ಎದುರು ಬಂಧಿಸಿದ್ದಾರೆ
ಫೋನ್ ಪೇ ಮೂಲಕ ರಾಕೇಶ್ ಮೊಬೈಲ್ ನಿಂದ ಮೊದಲಿಗೆ 3,000 ಹಾಕಿಸಿಕೊಂಡಿದ್ದ ಪ್ರದೀಪ್ ನಂತರ ನಗದು 2,000 ಹಾಗೂ ಇದೀಗ ಮತ್ತೆ 2,000 ಕ್ಕೆ ಬೇಡಿಕೆ ಇಟ್ಟಿದ್ದು ಅದನ್ನು ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಕಾರ್ಯಾಚರಣೆ ತಂಡದಲ್ಲಿ ಲೋಕಾಯುಕ್ತ ಪೊಲೀಸರಾದ ಅನಿಲ್ ನಾಯಕ್ ಲೋಕೇಶ್, ವಿಜಯಭಾಸ್ಕರ್, ಶ್ರೀಧರ್ ಪ್ರಸಾದ್ ಚಂದನ್ ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


