ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಅವಹೇಳನ ಮಾಡಿರುವುದನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸಿದೆ.
ಸನಾತನ ಧರ್ಮ ಡೆಂಗಿ, ಕಾಲರಾ, ಕೋವಿಡ್ ಇದ್ದಂತೆ. ಆ ರೋಗಗಳನ್ನು ನಾಶ ಮಾಡಿದಂತೆ ಸನಾತನ ಧರ್ಮವನ್ನೂ ನಾಶ ಮಾಡಬೇಕು ಎಂಬ ಹೇಳಿಕೆ, ವಿವೇಚನೆ ಕಳೆದುಕೊಂಡ ಮತ್ತು ಅಹಂಕಾರದ ಪರಮಾವಧಿ ಎಂದು ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಉಪಾಧ್ಯಕ್ಷ ಕೆ. ಎನ್. ಛಾಯಾಪತಿ ಹೇಳಿದ್ದಾರೆ.


