ಬೆಳಗಾವಿ: ನಗರದ ಕೆ ಎಸ್ ಆರ್ ಪಿ ಸಿ ಮೈದಾನದಿಂದ ಮಾಲಿನಿ ಮೈದಾನದವರೆಗೆ 10 ಕಿ.ಮೀಗಳವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಅದ್ಧೂರಿಯಾಗಿ ನಡೆದಿದ್ದು ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಜನಸಾಗರವೆ ನೆರದಿತ್ತು.
ಧಾರಿಯುದ್ದಕ್ಕೂ ಮೋದಿ ಮೋದಿ ಎಂಬ ಗಂಟಾಘೋಷ ಮೊಳಗುತ್ತಲೇ ಇದ್ದು ಭಾರತ್ ಮಾತಾ ಕಿ ಜೈ ಎಂಬ ಜೈಕಾರ ಕೇಳಿಬರುತ್ತಿತ್ತು. ಹೂವಿನ ಸುರಿಮಳೆ, ವಾದ್ಯ ವಿವಿಧ ಸಾಂಸ್ಕೃತಿಕ ವೇಷ ಭೂಷಣಗಳಲ್ಲಿ ಜನ ಅವರನ್ನು ಸ್ವಾಗತಿಸಿ ಅಭಿನಂದಿಸಿದರು. ಕೆಲ ಹೊತ್ತು ಸಮಯದಲ್ಲಿ ಜನರಿಗೆ ತಲೆಬಾಗಿ 2 ಕೈಗಳನ್ನು ಜೋಡಿಸಿ ನಮಸ್ಕರಿಸಿ ಅವರತ್ತ ಹೂವುಗಳ ಬೀಸುವುದರ ಮೂಲಕ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದರು.
ಈ ರೀತಿ ಬೆಳಗಾವಿಯಲ್ಲಿ ಕೆಲ ಎರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಆಗಮನ ಹಾಗೂ ಅವರ ಸ್ವಾಗತದ ತಯಾರಿಯಲ್ಲಿ ಬೆಳಗಾವಿ ಜನತೆ ಹಗಲಿರಳು ಶ್ರಮಿಸಿ ನಗರವನ್ನು ಅಲಂಕಾರ ಗೊಳಿಸಿದ್ದರು. ಬೆಳಗಾವಿ ಜನತೆಗೆ ಇದು ಒಂದು ಅದ್ಭುತ ಹಾಗೂ ಎಂದು ಮರೆಯಲಾರದ ದಿನವಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


