ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ಹಾಸ್ಯ ನಟ ಸಾಧುಕೋಕಿಲ ಹೇಳಿದರು.
ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಈಗ ನಾವು ದೊಡ್ಡ-ದೊಡ್ಡ ಬಿಲ್ಡಿಂಗ್, ಐಷರಾಮಿ ಜೀವನ, ಫ್ಲೈ ಓವರ್ ನೋಡುತ್ತಿದ್ದೇವೆ, ಆದರೆ ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ದಿನ ನಮ್ಮನ್ನು ಕರೆತಂದಿದ್ದು ಕಾಂಗ್ರೆಸ್ ಎಂದರು.
ಕಾಂಗ್ರೆಸ್ ಗೆ ಮೋಸ ಮಾಡಿದರೇ ತಂದೆತಾಯಿಗೆ ಮೋಸ ಮಾಡಿದಂತೆ, ಕಾಂಗ್ರೆಸ್ ಗೂ ಮತ್ತು ಜನರಿಗೂ ಇರುವ ಸಂಬಂಧ ಕೇವಲ ರಾಜಕೀಯದ್ದಲ್ಲ, ಹೃದಯದ ಸಂಬಂಧ ಎಂದರು.
ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹುಲಿ ಇದ್ದಂತೆ ಡಿ.ಕೆ.ಶಿವಕುಮಾರ್ ಸಿಂಹ ಇದ್ದಂತೆ ಇವರಿಬ್ಬರು ಇದ್ದ ಮೇಲೆ ಬೇರೆಯವರು ಏತಕ್ಕೆ, ಕಾಂಗ್ರೆಸ್ ನವರಿಗೆ ಓಟ್ ಹಾಕಿ ಎಂದು ಬೇಡಬೇಕಾ..?? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ಮತ ಹಾಕುವುದು ನಮ್ಮ ಕರ್ತವ್ಯ, ಕಾಂಗ್ರೆಸ್ ಗೆ ಮತ ಹಾಕದಿದ್ದರೇ ತಂದೆ-ತಾಯಿಗೆ ಮೋಸ ಮಾಡಿದಂತೆ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


