ಸರಗೂರು: ಬೆಳಕಿನ ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಂಭ್ರಮ, ಸಡಗರ. ಹಿರಿಯರು ಕಿರಿಯರೆನ್ನದೆ ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಿಕೊಳ್ಳುವವರೇ ಹೆಚ್ಚು. ತಾಲೂಕಿನ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಜನರು ಪಟಾಕಿ ಖರೀದಿಗೆ ಕಡಿಮೆಯಾಗಿಲ್ಲ.
ಪಟ್ಟಣದ ವ್ಯಾಪ್ತಿಯಲ್ಲಿ ಒಂದೇ ಕಡೆಗಳಲ್ಲಿ ಮಾತ್ರ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಪಟ್ಟಣದ ಆಶ್ರಯ ಬಡಾವಣೆ ಬಳಿ ಕಬಿನಿ ನಿರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ನಿರ್ಮಿಸಲು ಸ್ಥಳ ನಿಗದಿ ಮಾಡಿದ್ದು, ಈಗಾಗಲೇ ಹಲವು ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಸ್ಥಾಪಿಸಲಾಗಿದೆ. ಈ ಅಂಗಡಿಗಳಲ್ಲಿ ಭಾನುವಾರ ಮತ್ತು ಸೋಮವಾರ ಸಂಜೆಯ ವೇಳೆ ಖರೀದಿ ಜೋರಾಗಿತ್ತು.
ಈ ಬಾರಿ ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ತುಸು ಜಾಸ್ತಿಯಾಗಿದೆ. ಆದರೂ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸದಿರಲು ಸಾಧ್ಯವಿಲ್ಲ. ಅಂಗಡಿಯಿಂದ ಮಕ್ಕಳಿಗೆ ಬೇಕಾದ ಪಟಾಕಿ ಅಂಗಡಿಗೆ ಖರೀದಿಗೆ ಬಂದಿದ್ದ ಗ್ರಾಹಕ ಅಣ್ಣಯ್ಯ ಸ್ವಾಮಿ ತಿಳಿಸಿದರು.
ಆಶ್ರಯ ಬಡಾವಣೆ ಬಳಿ 10 ತಾತ್ಕಾಲಿಕ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮಂಗಳವಾರ ಮತ್ತು ಬುಧವಾರ ಪಟಾಕಿಗಳ ಮಾರಾಟ ಹೆಚ್ಚಾಗುವ ನಿರೀಕ್ಷೆ ಇದೆ. ಗ್ರಾಮೀಣ ಭಾಗದಿಂದ ಜನರು ಹಾಗೂ ಸಾರ್ವಜನಿಕರರು ಬಂದು ಪಟಾಕಿ ಖರೀದಿಗೆ ಬರುತ್ತಿದ್ದಾರೆ ಎಂದು ಪಟಾಕಿ ಮಾರಾಟಗಾರ ನಾಗರಾಮ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಸೂಚಿಸಿರುವ ಈ ಪ್ರದೇಶದಲ್ಲಿ ಮಾತ್ರ ಪಟಾಕಿ ಮಾರಲು ಅವಕಾಶವಿದೆ. ಜನರು ಕೂಡ ಇಲ್ಲಿಂದ ಮಾತ್ರ ಖರೀದಿಸಬೇಕು ಎಂದೂ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸಾರ್ವಜನಿಕರು ಹೂ ಹಾಗೂ ಪೂಜೆ ಕಾರ್ಯಕ್ರಮ ಸಾಮಗ್ರಿಗಳು ಅಂಗಡಿಗಳಲ್ಲಿ ಜೋರು. ಪಟಾಕಿಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರೂ ಸ್ವಲ್ಪ ಎಚ್ಚರ ತಪ್ಪಿದರೂ ಬದುಕನ್ನೆ ಕತ್ತಲಾಗಿಸುವ ಸಾಧ್ಯತೆಯೂ ಇದೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC