ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ಎರಡು ಹುಂಡಿಗಳನ್ನು ಒಡೆದು ಕಳ್ಳತನ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಎರಡು ಹುಂಡಿಗಳಲ್ಲಿನ ಹಣ, ಬೆಳ್ಳಿ , ಬಂಗಾರ, ಹಾಗೂ ಬೆಳ್ಳಿ ಪ್ರಭಾವಳಿ , ಮುಖ್ ಬದ್ನ , ನಾಗಾಭರಣಗಳನ್ನು ಕಳವು ಮಾಡಲಾಗಿದೆ.
ಎಂದಿನಂತೆ ಇಂದು ದೇವಾಲಯದ ಅರ್ಚಕರು ಮಂಗಳವಾರ ರಾತ್ರಿ ದಿನನಿತ್ಯದಂತೆ ಪೂಜೆ ಮುಗಿಸಿಕೊಂಡು ದೇವಾಲಯದ ಬೀಗ ಹಾಕಿ ಹೋಗಿದ್ದರು. ಇಂದು ಬೆಳಗ್ಗೆ ದೇವಾಲಯದ ಅರ್ಚಕ ವಿಶ್ವನಾಥ್ ದೇವಸ್ಥಾನಕ್ಕೆ ಆಗಮಿಸಿದ ವೇಳೆ ಕಳವು ನಡೆದಿರುವುದು ಬೆಳಕಿಗೆ ಬಂದಿದ್ದು, ಅವರು ತಕ್ಷಣವೇ ಸ್ಥಳೀಯ ಆಡಳಿತ ಮಂಡಳಿ ಅಧಿಕಾರಿಗಳಿಗೆ ಹಾಗೂ ಹಿರಿಯೂರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಹಿರಿಯೂರು ತಾಲ್ಲೂಕಿನ ಕಂದಾಯ ಇಲಾಖೆಯ ಎ ಡಿ ಎಮ್ ಸಿ ಶಿರಸ್ತರಾದ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿಯಾದ ಮಾಯವರ್ಮ , ಬಬ್ಬೂರು ಶಿವಣ್ಣ, ದ್ವಿದಸ ಸಹಾಯಕರಾದ ಚನ್ನಬಸವರಾಜು ಹಾಗೂ ಹಿರಿಯೂರು ನಗರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಪೋಲಿಸ್ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.
ದೇವಸ್ಥಾನದಲ್ಲಿ 12 ಸಿಸಿ ಕ್ಯಾಮಾರಗಳಿದ್ದು, ಆದರೆ, ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಮುಜರಾಯಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ನಮ್ಮ ತುಮಕೂರು. ಕಾಂ ಮಾಧ್ಯಮದ ಮೂಲಕ ಮಾತನಾಡಿದ ಕಂದಾಯ ಇಲಾಖೆಯ ಎ ಡಿ ಎಮ್ ಸಿ ತಿಪ್ಪೇಸ್ವಾಮಿಯವರು ಸಹ ಸಿ ಸಿ ಕ್ಯಾಮೆರಾ ಕೆಟ್ಟಿದ್ದು ಈ ವಿಷಯವನ್ನು ಈಗಾಗಲೇ ನಾವು ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.
ಹಿಂದೂ ವಿಧಾನ ಪರಿಷತ್ ನ ಶ್ರೇಷ್ಠ ಕಾರ್ಯದರ್ಶಿಯಾದ ಕೇಶವ ಹೆಗ್ಗಡೆ ಮಾತನಾಡಿ, ಕಳೆದ ಮಂಗಳವಾರ ಮಧ್ಯಾಹ್ನ ಹಿರಿಯೂರು ಮಸ್ಕಲ್ ಗ್ರಾಮದ ಮೈಲಾರಲಿಂಗೇಶ್ವರ ದೇವಾಲಯದಲ್ಲಿಯೂ ಕಳ್ಳತನವಾಗಿದೆ., ಇದು ನಿಜಕ್ಕೂ ಒಂದು ದುರ್ಘಟನೆ ಹಾಗೂ ಇದು ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯತೆ, ದೋಷ ಎಂದು ಆಕ್ರೋಶ ವ್ಯಕ್ತಪಡಿಸಿದರು
ವರದಿ : ಮುರುಳಿಧರನ್ ಆರ್ ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


