ತುಮಕೂರು: ಈ ದೇಶ ವಿಶಿಷ್ಟ ದೇಶ ಆಚಾರ ವಿಚಾರ ಸಂಸ್ಕೃತಿ ಎಲ್ಲವೂ ವಿಭಿನ್ನವಾಗಿದ್ದು, ನಮ್ಮ ಮೇಲೆ ಆಕ್ರಮಣ ನಡೆದರೂ ನಮ್ಮ ತನವನ್ನು ಉಳಿಸಿಕೊಂಡಿದೆ ಎಂದು ಮಾಜಿ ಸಿಎಂ ಸದಾನಂದ ಹೇಳಿದರು.
ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಮಾತನಾಡಿದ ಅವರು, ಒಬ್ಬ ದೇವೇಗೌಡ ಈ ದೇಶದ ಪ್ರಧಾನಿ ಆಗಿದ್ದು ನಮ್ಮ ಒಕ್ಕಲಿಗ ಸಮಾಜದ ಹೆಮ್ಮೆ. ಕುವೆಂಪು ವಿಶ್ವಮಾನವ ಸಮಾಜದ ಸಂದೇಶ ಕೊಟ್ಟಿದ್ದು, ಅವರು ನಮ್ಮ ಒಕ್ಕಲಿಗ ಸಮುದಾಯದವರು ಎನ್ನೋದು ಹೆಮ್ಮೆಯ ಸಂಗತಿ. 500 ವರ್ಷಗಳ ಹಿಂದೆ ಕೆಂಪೇಗೌಡರು ಸ್ಮಾರ್ಟ್ ಸಿಟಿ ಯೋಜನೆ ಪರಿಕಲ್ಪನೆ ಕೊಟ್ಟವರು. ಅಮೇರಿಕಾದಲ್ಲೂ ಕುಂಚಿಟಿಗ ಒಕ್ಕಲಿಗರ ಸಮುದಾಯ ಪಾರುಪತ್ಯ ಇದೆ ಎಂದು ಸದಾನಂದ ಗೌಡ ಹೇಳಿದರು.
ಎಲ್ಲೋ ಒಂದು ಕಡೆ ನಾನು ಗೌಡ ನಾನು ಒಕ್ಕಲಿಗ ಎಂದು ಹೇಳಲು ನಮ್ಮವರಲ್ಲಿ ಕೀಳರಿಮೆ ಇದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಒಕ್ಕಲಿಗರನ್ನು ಸೇರಿಸಲು ನನ್ನ ಪ್ರಯತ್ನ ನಿರಂತರವಾಗಿ ಕುಲ ಅಧ್ಯಯನ ಮಾಡಿ ಎಂದು ನಾನು ರಾಜ್ಯಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರಕ್ಕೆ ಒತ್ತಡ ತರುವ ಕೆಲಸ ನನ್ನಿಂದ ನಿರಂತರವಾಗಿ ಇರುತ್ತದೆ ಎಂದು ಅವರು ಹೇಳಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz