ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೂ ಮುನ್ನ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಇದೀಗ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಮತ್ತೆ ಸಿನಿಮಾ ಸೆಟ್ ಗೆ ಕಾಲಿಡಲಿದ್ದಾರೆ.
ಸುಮಾರು 9 ತಿಂಗಳುಗಳ ನಂತರ ನಟ ದರ್ಶನ್ ಸೆಟ್ ಗೆ ಕಾಲಿಡಲಿದ್ದಾರೆ. ಮುಂದಿನ ವಾರದಿಂದಲೇ ಶೂಟಿಂಗ್ ಆರಂಭಗೊಳ್ಳಲಿದ್ದು, ಅದಕ್ಕಾಗಿ ಶೂಟಿಂಗ್ ಸೆಟ್ ಗಳ ನಿರ್ಮಾಣ ಕೂಡ ಆಗ್ತಾ ಇದೆ ಎಂದು ಹೇಳಲಾಗಿದೆ.
ಎರಡನೇ ಹಂತದ ಚಿತ್ರೀಕರಣ ಇದಾಗಿದ್ದು, ಚಿತ್ರೀಕರಣದಲ್ಲಿ ನಟ ದರ್ಶನ್ ಭಾಗಿ ಆಗಲಿದ್ದಾರೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಅದರ ಜೊತೆಗೆ ಜಿಮ್ಗೂ ಸಹ ಹೋಗಲು ಆರಂಭಿಸಿದ್ದು, ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಲೆಂದೇ ಜಿಮ್ಗೆ ಹೋಗಿ ದೇಹ ದಂಡಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಹೈದರಾಬಾದ್ ಹಾಗೂ ರಾಜಸ್ಥಾನದಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4