nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿರಾ: ಕಾರ್ಯಕರ್ತರೇ ಶಾಶ್ವತ, ಬಿಜೆಪಿ ಅಧಿಕಾರದಲ್ಲಿ ಪುನಃ ಹಿಂದಿ ಜಾರಿ: ಬಿಜೆಪಿ 46ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ

    April 7, 2026

    ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ

    April 7, 2026

    ಹೊನ್ನುಡಿಕೆಯಲ್ಲಿ ನರ ಮತ್ತು ಮನೋರೋಗ ತಪಾಸಣಾ ಶಿಬಿರ: ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ ಎಂದ ಮಾಜಿ ಶಾಸಕ ಎಚ್.ನಿಂಗಪ್ಪ

    April 7, 2026
    Facebook Twitter Instagram
    ಟ್ರೆಂಡಿಂಗ್
    • ಶಿರಾ: ಕಾರ್ಯಕರ್ತರೇ ಶಾಶ್ವತ, ಬಿಜೆಪಿ ಅಧಿಕಾರದಲ್ಲಿ ಪುನಃ ಹಿಂದಿ ಜಾರಿ: ಬಿಜೆಪಿ 46ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ
    • ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ
    • ಹೊನ್ನುಡಿಕೆಯಲ್ಲಿ ನರ ಮತ್ತು ಮನೋರೋಗ ತಪಾಸಣಾ ಶಿಬಿರ: ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ ಎಂದ ಮಾಜಿ ಶಾಸಕ ಎಚ್.ನಿಂಗಪ್ಪ
    • ಮಧುಗಿರಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ರೈತ ಸಂಘದ ತೀವ್ರ ವಿರೋಧ; ಏಪ್ರಿಲ್ 13ಕ್ಕೆ ಪ್ರತಿಭಟನೆ
    • ವೈ.ಎನ್.ಹೊಸಕೋಟೆ: ಶಾಲಾ ಆವರಣದಲ್ಲಿ ಮದ್ಯದ ಬಾಟಲಿಗಳ ರಾಶಿ: ಕುಡುಕರ ಅಡ್ಡೆಯಾದ ವಿದ್ಯಾಮಂದಿರ
    • ಏ.15ರ ನಂತರ ಮನೆ ಮನೆಗೆ ಜನ ಗಣತಿ ಕಾರ್ಯಕರ್ತರು ಭೇಟಿ | ನಾಗರಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿ: ತಹಶೀಲ್ದಾರ್ ಮಂಜುನಾಥ್ ಕೆ. ಕರೆ
    • ತಿಪಟೂರು: ಕೃಷ್ಣ ಅವರಿಗೆ ಕೆಯುಡಬ್ಲೂಜೆ ರಾಜ್ಯ ಮಟ್ಟದ ಟಿ.ಕೆ.ಮಲಗೊಂಡ ದತ್ತಿ ಪ್ರಶಸ್ತಿ
    • ಚಿತ್ರೀಕರಣ ಪೂರೈಸಿದ ‘ಶಿಲ್ಪಾ ಶ್ರೀನಿವಾಸ್’: ಫ್ಯಾಮಿಲಿ ಸ್ಟಾರ್ ಅಭಿಜಿತ್ ನೃತ್ಯದೊಂದಿಗೆ ಕ್ಲೈಮ್ಯಾಕ್ಸ್ ಪೂರ್ಣ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ
    ತುಮಕೂರು February 21, 2026

    ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ

    By adminFebruary 21, 2026No Comments2 Mins Read
    dc gowri shankhar

    ತುಮಕೂರು: ತಾಲ್ಲೂಕಿನ ಹತ್ತೇನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ದೇವರ ಒಡವೆ ಕಳವು ಪ್ರಕರಣದಲ್ಲಿ ದೇವರ ತಾಳಿಯೂ ಕಳವಾಗಿತ್ತು. ದೇವರ ಒಡವೆ ಕಳವಾಗಿ ದೊಡ್ಡ ಅಪಚಾರವಾಗಿದೆ ಎಂದು ಭಕ್ತರು ಕಳವಳಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಇವರ ಆಪ್ತರಾದ ಕಾಂಗ್ರೆಸ್ ಮುಖಂಡ, ಉದ್ಯಮಿ ಊರುಕೆರೆ ಜಗದೀಶ್ ಅವರು ಹೊಸದಾಗಿ ತಾಳಿ ಮಾಡಿಸಿ ಶುಕ್ರವಾರ ಮಾರಮ್ಮ ದೇವಿಗೆ ಸಮರ್ಪಣೆ ಮಾಡಿದರು.

    ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ದೇವಸ್ಥಾನ ಸಮಿತಿ ಮುಖಂಡರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮುಖದಲ್ಲಿ ಮಾರಮ್ಮ ದೇವಿಗೆ ತಾಳಿ ಸಮರ್ಪಿಸಿ ಗೌರಿಶಂಕರ್ ಮತ್ತು ಬಳಗ ವಿಶೇಷ ಪೂಜೆ ಸಲ್ಲಿಸಿದರು.


    Provided by
    Provided by

    ಉದ್ಯಮಿ ಊರುಕೆರೆ ಜಗದೀಶ್ ಅವರು 30 ಲಕ್ಷ ರೂ. ವೆಚ್ಚದಲ್ಲಿ ಹತ್ತೇನಹಳ್ಳಿ ಮಾರಮ್ಮನ ಗರ್ಭಗುಡಿ ನಿರ್ಮಾಣ ಮಾಡಿಸಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ರಾಜಗೋಪುರ ನಿರ್ಮಾಣಕ್ಕೆ ತಾವು, ಜಗದೀಶ್ ಹಾಗೂ ತಮ್ಮ ಗೆಳೆಯರ ಬಳಗ ಎಷ್ಟೇ ಖರ್ಚಾದರೂ ದೇಣಿಗೆ ನೀಡುತ್ತೇವೆ. ಭಕ್ತರು ನೀಡುವ ದೇಣಿಗೆಯ ಪ್ರತಿ ರೂಪಾಯಿಯ ಲೆಕ್ಕವನ್ನು ಪಾರದರ್ಶಕವಾಗಿ ದಾಖಲು ಮಾಡುವಂತೆ ಡಿ.ಸಿ. ಗೌರಿಶಂಕರ್ ತಹಶೀಲ್ದಾರರಿಗೆ ಸೂಚಿಸಿದರು.

    ಅಲ್ಲದೆ ಕಾಮಗಾರಿಗೆ ಕಲ್ಲು ಖರೀದಿಗೆಂದು ಗೌರಿಶಂಕರ್ ಅವರು ಈ ವೇಳೆ ತಹಶೀಲ್ದಾರ್ ರಾಜೇಶ್ವರಿ ಅವರಿಗೆ 2 ಲಕ್ಷ ರೂ. ದೇಣಿಗೆ ನೀಡಿದರು.

    ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಂಡಿತ್ ನಾರಾಯಣಪ್ಪ, ಪ್ರಕಾಶ್, ಪಾಲನೇತ್ರಯ್ಯ, ಹತ್ತೇನಹಳ್ಳಿ ಮಂಜುನಾಥ್, ನರಸಾಪುರ ಹರೀಶ್, ಹಾಲನೂರು ಅನಂತಕುಮಾರ್, ಓರೇಹಳ್ಳಿ ಮಹೇಶ್, ಚಿಕ್ಕನಾರವಂಗಲ ರವಿ, ಕೈದಾಳ ರಮೇಶ್, ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

    ರಿಂಗ್ ರಸ್ತೆಗೆ ತೀವ್ರ ವಿರೋಧ: ರೈತರ ಜಮೀನು ವಶಪಡಿಸಿಕೊಂಡು, ರೈತರ ವಿರೋಧದ ನಡುವೆ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ನಿರ್ಮಾಣ ಕ್ರಮವನ್ನು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಾವುದೇ ಸರ್ಕಾರ ಹೋಗಬಾರದು. ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

    ಈ ಬಗ್ಗೆ ರೈತರೊಂದಿಗೆ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಹೇಳಿದ ಗೌರಿಶಂಕರ್, ಶನಿವಾರ ಬೆಳಗ್ಗೆ 9.30ಕ್ಕೆ ನಗರದ ಸಮೃದ್ಧಿ ಗ್ರಾಂಡ್ ಹೋಟೆಲ್‌ನಲ್ಲಿ ರೈತರ ಸಭೆ ಕರೆದಿದ್ದು, ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ

    April 7, 2026

    ಹೊನ್ನುಡಿಕೆಯಲ್ಲಿ ನರ ಮತ್ತು ಮನೋರೋಗ ತಪಾಸಣಾ ಶಿಬಿರ: ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ ಎಂದ ಮಾಜಿ ಶಾಸಕ ಎಚ್.ನಿಂಗಪ್ಪ

    April 7, 2026

    ತುಮಕೂರು: 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌

    April 6, 2026

    Leave A Reply Cancel Reply

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸಿರಾ

    ಶಿರಾ: ಕಾರ್ಯಕರ್ತರೇ ಶಾಶ್ವತ, ಬಿಜೆಪಿ ಅಧಿಕಾರದಲ್ಲಿ ಪುನಃ ಹಿಂದಿ ಜಾರಿ: ಬಿಜೆಪಿ 46ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ

    April 7, 2026

    ಶಿರಾ/ತುಮಕೂರು: ದೇಶದಲ್ಲಿ ಸುಮಾರು 15 ಕೋಟಿ ಬಿಜೆಪಿ ಕಾರ್ಯಕರ್ತರು ಇದ್ದು, ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟುವುದು ನಮ್ಮ ಮೂಲ…

    ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ

    April 7, 2026

    ಹೊನ್ನುಡಿಕೆಯಲ್ಲಿ ನರ ಮತ್ತು ಮನೋರೋಗ ತಪಾಸಣಾ ಶಿಬಿರ: ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ ಎಂದ ಮಾಜಿ ಶಾಸಕ ಎಚ್.ನಿಂಗಪ್ಪ

    April 7, 2026

    ಮಧುಗಿರಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ರೈತ ಸಂಘದ ತೀವ್ರ ವಿರೋಧ; ಏಪ್ರಿಲ್ 13ಕ್ಕೆ ಪ್ರತಿಭಟನೆ

    April 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.