ಕೋಹಳ್ಳಿ: ಮಹಾರಾಷ್ಟ್ರದ ಜತ್ತ ತಾಲೂಕಿನ ಗೊಗವಾಡ ಗ್ರಾಮದಲ್ಲಿ ನ.12ರಂದು ನಡೆಯುವ ಧಮ್ಮಭೂಮಿ ಲೋಕಾರ್ಪಣೆ ಸಮಾರಂಭಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ ಎಂದು DSS ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಆಲಗೂರ ಕರೆ ನೀಡಿದರು.
ಗ್ರಾಮದಲ್ಲಿ ಜತ್ತತಾಲೂಕಿನ ಗುಗವಾಡ ಗ್ರಾಮದಲ್ಲಿ ಧಮ್ಮಭೂಮಿ ಲೋಕಾರ್ಪಣೆ ಸಮಾರಂಭದ ಪ್ರಚಾರ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ, ಬೋಧಿಸತ್ವ ಪರಮಪೂಜ್ಯ ಡಾ.ಬಾಬಸಾಹೇಬ ಅಂಬೇಡ್ಕರ್ ಅವರು ನೀಡಿದ ಧಮ್ಮದ ಪ್ರಚಾರ ಮಾಡಲು ಮತ್ತು ಆದರ್ಶ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕೃತಿಕ ಕೇಂದ್ರ ನಿರ್ಮಿಸಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಲ್ಪನೆಯಂತೆ ಮಾನವ ಅಭಿವೃದ್ಧಿ ಕೇಂದ್ರವನ್ನು ರಚಿಸಲು ಸಿ.ಆರ್. ಸಾಂಗಲೀಕರ ಇವರು ಪ್ರಯತ್ನಿಸಿದ್ದಾರೆ. ನಾಗಪೂರದ ದೀಕ್ಷಾಭೂಮಿ, ಮುಂಬೈನ ಚೈತ್ಯಭೂಮಿ, ಮಾಣಗಾವನ ಸನ್ಮಾನಭೂಮಿ ರೀತಿ ಗೂಗವಾಡದ ಧಮ್ಮಭೂಮಿಯಾಗಿದ್ದು, ಲೋಕಾರ್ಪಣೆಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ ಎಂದರು.
ದಲಿತ ಮುಖಂಡರಾದ ರಘುನಾಥ್ ನಾಟಿಕಾರ, ಪ್ರಕಾಶ ಕನ್ನಾಳ, ಲಖನ್ ಗುರಪ್ಪಗೊಳ, ಹಣಮಂತ ಭಜಂತ್ರಿ, ತುಖಾರಾಮ ಭಜಂತ್ರಿ, ಪ್ರಭು ದೊಡ್ಡಮನಿ, ವಿನೋದ ಗುರಪ್ಪಗೊಳ, ವೈಭವ ಕನ್ನಾಳ, ರಾಜು ಭಜಂತ್ರಿ, ರಾಜು ನಾಕಮಾನ, ರಾಜು ತಳಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


