ಪಾವಗಡ : ತಾಲೂಕಿನ ಎಸ್.ಎಸ್.ಕೆ.ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಹಿಳಾ ಜ್ಞಾನವಿಕಾಸ ಕಾಯ೯ಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾಯ೯ಕ್ರಮ ಆಯೋಜಿಸಲಾಗಿತ್ತು.
ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕ್ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಡಿ.ಜಿ.ಸುನೀತ, ಪೂಜ್ಯ ಡಾ ವಿರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರ ಆಶೀವಾ೯ದದೊಂದಿಗೆ ಕೇಂದ್ರಗಳ ಮೂಲಕ ನಿಮಗೆ ವಿವಿಧ ರೀತಿಯ ಜಾಗೃತಿ ಕಾಯ೯ಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ನೀವೆಲ್ಲರೂ ಯೋಜನೆಯ ಹಾಗೂ ಇಲಾಖೆಗಳ ಕಾಯ೯ಕ್ರಮಗಳನ್ನ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಬೆಂಗಳೂರು ಪ್ರಾಧೇಶಿಕ ಕಚೇರಿಯ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಸಂಧ್ಯಾಶೆಟ್ಟಿಯವರು ಜ್ಞಾನವಿಕಾಸ ಸಂಘಗಳ ಸದಸ್ಯರ ಜವಾಬ್ಧಾರಿಗಳು, ಕಾಯ೯ಕ್ರಮಗಳ ಬಗ್ಗೆ ಮಾತನಾಡಿದರು.
ಪಾವಗಡ ತಾಲೂಕಿನ ತಾಲ್ಲೂಕ್ ಯೋಜನಾಧಿಕಾರಿಗಳಾದ ಮಹೇಶ್ ಹೆಚ್., ಯೋಜನೆಯ ಪ್ರಾರಂಭ ದಿನಗಳಿಂದ ಇಲ್ಲಿಯವರೆಗೂ ಯೋಜನೆ ನಡೆದು ಬಂದ ದಾರಿ ಹಾಗೂ ಯೋಜನೆಯ ಕಾಯ೯ಕ್ರಮಗಳ ಬಗ್ಗೆ ಹಾಗು ಜ್ಞಾನವಿಕಾಸ ಕೇಂದ್ರಗಳ ಗುರಿ ಉದ್ದೇಶಗಳ ಬಗ್ಗೆ ಮಾತನಾಡಿದರು.
ಪೂಜಾ ವೈದ್ಯಾಧಿಕಾರಿಗಳು ಮಹಿಳಾ ಆರೋಗ್ಯಸಮಸ್ಯೆಗಳು ಸವೈ೯ಕಲ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನ ಜನ ಜಾಗೃತಿ ಸದಸ್ಯರಾದ ರತ್ನಮ್ಮನವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೀತಾ ಉಪಾಧ್ಯಕ್ಷರು ಪುರಸಭೆ, ಜನಜಾಗೃತಿ ಸದಸ್ಯರಾದ ರಾಜಗೋಪಾಲಪ್ಪ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಕಸಬಾ ರೊಪ್ಪ ವಲಯದ ಮೇಲ್ವಿಚಾರಕರು ಸೇವಾಪ್ರತಿನಿಧಿಗಳು ಜ್ಞಾನವಿಕಾಸ ಕೇಂದ್ರ ಗಳ ಸದಸ್ಯರು ಪತ್ರಕತ೯ರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx