ಬೆಳ್ಳೂರು: ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ, ಬೆಳ್ಳೂರು ಪಟ್ಟಣದ ಶ್ರೀ ವಿಮಲನಾಥ ಜಿನಮಂದಿರ ಹಾಗೂ ಶ್ರೀ ಪುರಾಣ ಸಾಗರ ಮುನಿ ಮಹಾರಾಜರ 27ನೇ ವರ್ಷ ಯೋಗ ಚಾತುರ್ಮಾಸ ಇಂದು ವೈಭವದಿಂದ ಸಂಪನ್ನಗೊಂಡಿತು.
ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿ ಶ್ರೀ ಲಕ್ಷ್ಮೀ ಸೇನಾ ಭಟ್ಟರಕ ಮಹಾಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ಕಂಬದಹಳ್ಳಿ ಜೈನಮಠದ ಸ್ವಸ್ತಿ ಶ್ರೀ ಮಹಾಸ್ವಾಮಿಗಳು ಆಶೀರ್ವಾದದೊಂದಿಗೆ ನಡೆದ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ನೋಂಪಿಗಳು, ಆರಾಧನೆಗಳು, ಪೂಜೆಗಳು, ಸ್ವಾಧ್ಯಾಯಗಳು, ಮುನಿ ಮಹಾರಾಜರ ಪಿಂಚಿ ಪರಿವರ್ತನೆ ಹಾಗೂ ಧರ್ಮಚಕ್ರ ಆರಾಧನೆಗಳು ನಡೆದವು.
ಕಾರ್ಯಕ್ರಮದಲ್ಲಿ ಮೂಲ ಸ್ವಾಮಿಗೆ ಅಭಿಷೇಕ, ಧ್ವಜಾರೋಹಣ, ಮಂಗಳ ಕಳಸ, ಸಮವಸರಣ ಉದ್ಘಾಟನೆ, ಧರ್ಮಚಕ್ರ ಆರಾಧನೆ, ನಿತ್ಯ ನಿಧಿ ಅಭಿಷೇಕ, ಆರತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸ್ಥಾನಿಕ ಪುರೋಹಿತ ಅಜಿತ್ ಬಸ್ತಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪದ್ಮನಾಭ ,ಶಾಂತಲಾ ಅಜಿತ್ ಸೇರಿದಂತೆ ಶ್ರೀ ದಿಗಂಬರ ಜೈನ ಸಮಾಜದ ಪದಾಧಿಕಾರಿಗಳು, ಜಿನ ವಾಣಿ ಮಹಿಳಾ ಸಮಾಜ, ಯುವಕ ಸಂಘಟನೆಗಳು, ಜೈನ ಸಮಾಜದ ಪದಾಧಿಕಾರಿಗಳು ಸೇರಿದಂತೆ ಶ್ರಾವಕ –ಶ್ರಾವಕಿಯರು ಭಾಗವಹಿಸಿದ್ದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296