ಮಂಗಳೂರು: ಧರ್ಮಸ್ಥಳದಲ್ಲಿ ಹಲವಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ದೂರುದಾರ ಗುರುತಿಸಿದ 9ನೇ ಸ್ಥಳದಲ್ಲಿ ಶನಿವಾರ ಮತ್ತೆ ಶೋಧಕಾರ್ಯ ನಡೆಸುತ್ತಿದೆ.
ಅಧಿಕಾರಿಗಳು ಉಜಿರೆ–ಧರ್ಮಸ್ಥಳ–ಕೊಕ್ಕಡ ರಾಜ್ಯ ಹೆದ್ದಾರಿ (ಎಸ್‌ಎಚ್ –73) ದ ನೇತ್ರಾವತಿ ನದಿ ದಂಡೆಯ ಪಕ್ಕದಲ್ಲಿರುವ ಸ್ಥಳಕ್ಕೆ ಬೆಳಿಗ್ಗೆ 11:30 ರ ಸುಮಾರಿಗೆ ತಲುಪಿದ್ದು, ಇದು ಸತತ ಐದನೇ ದಿನದ ಶೋಧ ಕಾರ್ಯವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಎಸ್ ಐಟಿ ಶನಿವಾರ ದೂರುದಾರರ ಸಮ್ಮುಖದಲ್ಲಿ 9ರಿಂದ 12 ರವರೆಗಿನ ನಾಲ್ಕು ಪಕ್ಕದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲು ಯೋಜಿಸಿದೆ. ಅನಾಮಧೇಯ ದೂರುದಾರ-ಸಾಕ್ಷಿ ಗುರುತಿಸಿದ 15 ಸ್ಥಳಗಳಲ್ಲಿ ಈ ಸ್ಥಳಗಳೂ ಸೇರಿವೆ. ಆತ ಹಲವಾರು ವರ್ಷಗಳಿಂದ ನದಿ ದಂಡೆಯ ಉದ್ದಕ್ಕೂ ಅನೇಕ ಮಾನವ ಶವಗಳನ್ನು ಹೂಳಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC