ಶಿಥಿಲಾವಸ್ಥೆಯಲ್ಲಿರುವ ಹಾಗೂ ನೂತನವಾಗಿ ನಿರ್ಮಿಸಲಾಗುತ್ತಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಗುರುತಿಸಿ ಅದಕ್ಕೆ ಸೂಕ್ತ ಆರ್ಥಿಕ ನೆರವನ್ನು ಒದಗಿಸಿ ಅದರ ಕಾಯಕಲ್ಪಕ್ಕೆ ಕಂಕಣ ತೊಟ್ಟಿರುವ ಡಾ.ವೀರೇಂದ್ರ ಹೆಗ್ಗಡೆಯವರ ಕಾರ್ಯ ಪ್ರಶಂಸನೀಯ ಎಂದು ಶ್ರೀರಾಮ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಂದ್ರ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ದೊಡ್ಡಪೇಟೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀರಾಮ ಮಂದಿರದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಮಂಜೂರಾದ 2 ಲಕ್ಷ ಮೌಲ್ಯದ ಡಿ ಡಿ ಯನ್ನು ಸ್ವೀಕರಿಸಿ ಅವರು ಮಾತನ್ನಾಡಿದರು.
ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಿಪಟೂರು ತಾಲ್ಲೂಕಿನಲ್ಲಿ ಕಳೆದ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, 2022-23 ನೇ ಸಾಲಿನಲ್ಲಿ ಇಡೀ ರಾಜ್ಯದಲ್ಲೇ ಗುರುತಿಸಲ್ಪಟ್ಟಿದೆ. ತಾಲ್ಲೂಕಿನಲ್ಲಿ ಸುಮಾರು 120 ಕೋಟಿಯಷ್ಟೂ ಆರ್ಥಿಕ ವ್ಯವಹಾರ ನಡೆದಿದ್ದು, ಇದು ಪಾರದರ್ಶಕವಾಗಿಯೂ ಹಾಗೂ ಸಮರ್ಪಕ ಸದ್ವಿನಿಯೋಗವಾಗಿರುವುದು ಶ್ರೀ ಕ್ಷೇತ್ರದ ಆರ್ಥಿಕ ಶಿಸ್ತಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು
ಸಂದರ್ಭದಲ್ಲಿ ಮಂದಿರ ಅಭಿವೃದ್ಧಿ ಸಮತಿಯ ಕಾರ್ಯಾಧ್ಯಕ್ಷ ರಮೇಶ್, ಕೋಶಾಧಿಕಾರಿ ಮಂಜುನಾಥಸ್ವಾಮಿ, ಟ್ರಸ್ಟಿಗಳಾದ ರಾಜ್ ಶೇಖರ್, ಶಿವಕುಮಾರ್, ಸಿಂಗ್ರಿ ದತ್ತಪ್ಪ ತಾಲ್ಲೂಕಿನ ಯೋಜನಾಧಿಕಾರಿ ಉದಯ್, ಮೇಲ್ವೀಚಾರಕ ಸಂತೋಷ್, ರೋಟರಿ ಸಂಸ್ಥೆಯ ಸುರೇಶ್ ಬಾಬು ಸೇವಾಪ್ರತಿನಿಧಿ ಷಹತಾಜ್ ಬಾನು ಹಾಗೂ ಮಂದಿರ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ಧರು…
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy