ತುಮಕೂರು: ಪ್ರತಿಯೊಬ್ಬ ಪ್ರಜೆಯೂ ನೆಲದ ಕಾನೂನನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಸಾರ್ವಜನಿಕ ಜೀವನಗಳಲ್ಲಿ ಏಕಾಏಕಿ ಕಾನೂನಾತ್ಮಕ ಸಮಸ್ಯೆಗಳು ಎದುರಾದಾಗ ಅದನ್ನು ಪರಿಹರಿಸುವುದು ಹೇಗೆ? ಎನ್ನುವುದು ತೋಚದೇ ಸಾಕಷ್ಟು ಜನರು ಕಂಗಾಲಾಗುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಧಿ ಪ್ರಜ್ಞ ಕರ್ನಾಟಕ ಕಾನೂನು ಸ್ವಯಂ ಸೇವಾ ನೊಂದಾಯಿತ ಸಂಸ್ಥೆ ‘ಕಾನೂನು ಸಮಸ್ಯೆಗಳಿಗೆ ನೇರವಾಗಿ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರ ಜೊತೆ ಸಂವಾದ’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಫೆಬ್ರವರಿ 16(ಇಂದು)ರಿಂದ ಪ್ರತಿ ಭಾನುವಾರ ಕಾನೂನು ಅರಿವು ಕಾರ್ಯಕ್ರಮ ಆನ್ ಲೈನ್ ಮೂಲಕ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೇರವಾಗಿ ಭಾಗಿಯಾಗಬಹುದಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ಪುರುಷೋತ್ತಮ್ ಜಿ. ಅವರು ತಿಳಿಸಿದ್ದಾರೆ.
ಫೆಬ್ರವರಿ 16ರ ದಿನವಾದ ಇಂದು ಕಾನೂನು ಸಮಸ್ಯೆಗಳ ಬಗ್ಗೆ ಉಚಿತವಾಗಿ ನೇರ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಬಾಬಾಸಾಹೇಬ್ ಜಿನರಾಳ್ಕರ್ ವಿಶ್ರಾಂತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಕಾನೂನು ಸಲಹೆಗಾರರು, ಡಾ.ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಇವರು ಭಾಗವಹಿಸಲಿದ್ದಾರೆ.
ಇಂದು ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಝೂಮ್(Zoom) ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಸಂಪೂರ್ಣವಾಗಿ ನಮ್ಮ ತುಮಕೂರು ವಾಹಿನಿಯಲ್ಲಿ ಲಭ್ಯವಿರಲಿದೆ.
ಕಾರ್ಯಕ್ರಮದಲ್ಲಿ ಭಾಗಿಯಾಗೋದು ಹೇಗೆ?
ಇಂದು ರಾತ್ರಿ 8 ಗಂಟೆಗೆ ಸರಿಯಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ಕಾರ್ಯಕ್ರಮಕ್ಕೆ ಜಾಯಿನ್ ಆಗಬಹುದಾಗಿದೆ. ನೀವು ಮೊಬೈಲ್ ನಲ್ಲಿ ಕಾರ್ಯಕ್ರಮವನ್ನ ವೀಕ್ಷಿಸಬೇಕಾದರೆ Zoom Meeting ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
ಕಾರ್ಯಕ್ರಮದ ಲಿಂಕ್: https://us02web.zoom.us/j/81239599948?pwd=SerZ5olGRrXN7dHwbQXjUFkbT13gNS.1
Meeting ID: 812 3959 9948
Passcode: 1234
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4