ತುಮಕೂರು: ಸಮಾಜದಲ್ಲಿ ಸಮಾನತೆ ಸಭ್ಯತೆ ಶಿಸ್ತು ಬದ್ಧ ಜೀವನವೇ ಕಮಲ ಹಂಪನ ಬದುಕಾಗಿತ್ತು ಎಂದು ಅವರು ಸಾಹಿತಿ ಎಚ್.ಎನ್ . ರಾಜ್ಯಶ್ರೀ ತಿಳಿಸಿದರು.
ತುಮಕೂರಿನ ಕನ್ನಡ ಸಾಹಿತ್ಯ ಭವನದ ವತಿಯಿಂದ ನಾಡೋಜ ಕಮಲ ಹಂಪನ ಬದುಕು ಬರಹ ಗೋಷ್ಠಿ, –2 ರಲ್ಲಿ ಕಮಲ ಬಾಳಿನ ಬಗ್ಗೆ ಮಾತನಾಡಿದರು.
ಕಮಲ ಹಾಗೂ ಹಂಪ ನಾಗರಾಜಯ್ಯ ಸರ್ಕಾರದಿಂದ ಸ್ವಂತಕ್ಕೆ ಯಾವುದೇ ಸಹಾಯ ಪಡೆದಿಲ್ಲ ಅವರು ಎಲ್ಲೂ ಹೊರಗಡೆ ಆಹಾರ ಸೇವಿಸಿದವರಲ್ಲ, ಶಿಸ್ತು ಬದ್ಧ ಜೀವ ಜೀವನದ ಮುಖಿನ ಸಭ್ಯ ಜೀವಮಾನ ನಡೆಸಿದರು ಅವರ ಭಾವನೆಗಳು ವಿಶಿಷ್ಟವಾದವು ಎಂದರು.
ಇಳಿಯ ವಯಸ್ಸಿನಲ್ಲಿ ಅವರು ಜೀವನದ ಪಾಠ ಕಲಿಸಿದರು, ಎಲ್ಲಾ ಚಟುವಟಿಕೆಗಳಲ್ಲಿ ತಂದೆಗೆ ನೆರವಾಗಿದ್ದರು, ಅವರು ಬದುಕು ನಮಗೆ ಪಾಠವಾಗಿತ್ತು ಎಂದ ಅವರು ವ್ಯಕ್ತಿಯಲ್ಲ ಶಕ್ತಿಯಾಗಿದ್ದರು ಎಂದರು.
ಸಮಾಜದಲ್ಲಿ ಹೇಗೆ ಬದುಕಬೇಕೆನ್ನುವುದನ್ನು ಸಮಾಜಕ್ಕೆ ವಿಶ್ವ ಮಾನವರಾಗಿ ತೋರಿಸಿ ಕೊಟ್ಟರು ವಿಶ್ವಮಾನವರಾಗುವಂತೆ ಸಲಹೆ ನೀಡಿದರು.
ಲೇಖಕಿ ಡಾ.ಎನ್ .ಆರ್.ಲಲಿತಾಂಬ ಕಮಲ ಹಂಪನ ರವರು ಸಂಶೋಧನೆ ಮತ್ತು ವೈಚಾರಿಕ ಕೃತಿಗಳ ಬಗ್ಗೆ ವಿಚಾರ ಮಂಡಿಸಿ ಸರಸ್ವತ ಲೋಕದಲ್ಲಿ ಹಂಪನ ಬದುಕು ನಮಗೆ ದಾರಿ ದೀಪವಾಗಿದೆ. ಮಹಿಳೆಯರ ಬಗ್ಗೆ ಅವರಿಗೆ ಹೆಚ್ಚಿನ ಒಲವು ಹೊಂದಿದ್ದರು. ಅವರ ಸಾಹಿತ್ಯ, ಸಂಸ್ಕೃತಿ, ಕಲೆ, ಬದುಕು, ಬರಹಗಳಿಗೆ ಸ್ಪೂರ್ತಿಯಾಗಿದ್ದವು, ಅವರ ಸಂಶೋಧನಾ ನಿಲುವುಗಳು ನಮಗೆ ಸ್ಪೂರ್ತಿಯಾದವು ಎಂದರು.
ಅವರ ಅಧ್ಯಯನ ಪಯಣ ವಿಶಿಷ್ಟವಾದದ್ದು, ಶಿಸ್ತುಬದ್ಧ ಸಾಹಿತ್ಯ ಹೊಂದಿದರು. ಸೃಜನಶೀಲ ಬರಹಗಾರರಾಗಿದ್ದರು. ಸಂಶೋಧನೆ ಬಗ್ಗೆ ವ್ಯತ್ಯಾಸ ಆಧಾರಗಳು ಇಲ್ಲದೆ ಪುರಸ್ಕೃತರಾಗುತ್ತಿರಲಿಲ್ಲ, ಯಾವುದಕ್ಕೂ ಉಲ್ಲೇಖಗಳು ಅಗತ್ಯ ಈ ಬಗ್ಗೆ ಸಂಶೋಧಕರು ಗಮನಹರಿಸಬೇಕು ಯಾವುದೇ ವಿಷಯ ಪೂರ್ವ ಪರ ಹಿನ್ನೆಲೆ ಹೊಂದಿರಬೇಕು ,ಯಾವುದೇ ಸಂಶೋಧನೆ ಸಮಾಜ ಮುಖ್ಯವಾಗಿರಬೇಕು ಎಂದರು .ಯಾವುದೇ ಕಾರ್ಯಕ್ಕೆ ಅಹಿಂಸೆ, ಶಾಂತಿ, ಜೈನ ಸಮಾಜದ ಸಮಸ್ಯೆಗಳಿಗೆ ಪರಿಹಾರವಾಗಿವೆ ಎಂದರು.
ಡಾ.ಗಂಗಾಂಬಿಕ ಗೋವರ್ಧನ್ ಕಮಲ ರವರ ಸೃಜನಶೀಲ ಬರಹಗಳು ಕುರಿತು ಮಾತನಾಡಿ ನಾಡೋಜಾ ಕಮಲ ಹಂಪನ ರವರ ಅಧ್ಯಯನ ಪೀಠ ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಬೇಕು. ಈ ಸಂಬಂಧ ಕನ್ನಡಿಗರು ಕೈಜೋಡಿಸಿರಿ ಇದು ಸಾಧ್ಯ ಎಂದರು. ಕಾದಂಬರಿ ಕಾರ ರಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ಮಹಿಳೆರ ದಿಟ್ಟತನ ಬೆಳೆಸಿಕೊಳ್ಳುವಂತೆ ಕರೆ ನೀಡಿದವರು. ಸಂಶೋಧನೆಗೆ ಆತ್ಮಸ್ಥೈರ್ಯ ಅಗತ್ಯ .ಕಮಲ ಹಂಪನವರು ಯಾವುದೇ ವಿಚಾರದಲ್ಲಿ ವಾಸ್ತವ್ಯಕತೆ ಕಾಣಬಹುದು ಇವರು ಭಾಷಾ ಪ್ರೌಢ ಮಹತ್ವದ್ದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ .ಎಸ್. ಸಿದ್ದಲಿಂಗಪ್ಪ ,ಡಾ. ಡಿ.ಎನ್ .ಯೋಗೇಶ್ವರ್ ಡಾ. ಸಣ್ಣ ಹೊನ್ನಯ್ಯ ಕಂಟಲಗೆರೆ, ಪಚ್ಚೆಶ್ ಜೈನ್ ,ಗೋಕುಲ ವೀರೇಂದ್ರ ಎಸ್ .ಯೋಗಾನಂದ, ಚಿಕ್ಕ ಬೆಳ್ಳಾವಿ ಶಿವಕುಮಾರ್ ಸೇರಿದಂತೆ ಶೃತ ಜೈನ್ ಮಹಿಳಾ ಮಿಲನ , ಪದ್ಮಾಂಬ ಮಹಿಳಾ ಸಮಾಜದ ಮುಖಂಡರುಗಳು, ಜೈನ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು,ಶ್ರಾವಕ – ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q