ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿ ಕಡಿತಕ್ಕೊಳಗಾಗುವ ನಾಗರೀಕರಿಗೆ ದಾಖಲೆಗಳ ಪರಿಶೀಲನಾ ಮತ್ತು ಪರಿಹಾರಧನ ವಿತರಣೆಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗುವ ವ್ಯಕ್ತಿಗಳಿಗೆ ತಗುಲುವ ಚಿಕಿತ್ಸಾ ವೆಚ್ಚ, ಪರಿಹಾರ ಧನ ಹಾಗೂ ಮರಣ ಸಂಭವಿಸಿದ್ದಲ್ಲಿ ಮರಣ ಹೊಂದಿದವರ ಸಂಬಂಧಿತರಿಗೆ ಮರಣೋತ್ತರ ಪರಿಹಾರಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಲು ಸಮಿತಿ ರಚಿಸುವಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ.
ಆಯುಕ್ತರಿಂದ 5 ಮಂದಿಗೆ ಪರಿಹಾರ ಧನ ವಿತರಣೆ :
ರೇಬಿಸ್ ನಾಯಿಯ ದಾಳಿಗೆ ಒಳಗಾದ ರಾಮಕೃಷ್ಣ ರಾವ್ ಬಿನ್ ನಾಗಪ್ಪ(೬೫ ವರ್ಷ), ಸಂಜೀವಿನಿ ಬಿನ್ ರಮೇಶ್(೯ ವರ್ಷ), ಶಿವಮ್ಮ ಕೋಂ ರಾಜಶೇಖರ್(೫೨ ವರ್ಷ), ಜಾಹೀದ್ ಖಾನ್ ಬಿನ್ ನಯಾಜ್ ಖಾನ್(೧೪ ವರ್ಷ) ಮತ್ತು ಬಾಬಾ ಜಾನ್ ಎಂ ಬಿನ್ ಮೆಹಬೂಬ್ ಪಾಷ (೩೦ ವರ್ಷ) ಅವರಿಗೆ ತಲಾ ೫,೦೦೦ ರೂ.ಗಳಂತೆ ಪಾಲಿಕೆ ವತಿಯಿಂದ ಆಯುಕ್ತ ಬಿ.ವಿ.ಅಶ್ವಿಜ ಅವರು ಸಂತ್ರಸ್ತರ ಮನೆಗೆ ತೆರಳಿ ಚೆಕ್ ಮೂಲಕ ಪರಿಹಾರ ಧನ ವಿತರಣೆ ಮಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೂ ಸುಮಾರು ೫೦೦ ಬೀದಿನಾಯಿಗಳಿಗೆ ರಿಂಗ್ ವ್ಯಾಕ್ಸಿನೇಷನ್ ಮಾಡಿಸುವ ಕ್ರಮವಹಿಸಲಾಗಿದೆ. ವ್ಯಾಕ್ಸಿನೇಷನ್ ಮಾಡಿಸುವ ಸ್ಥಳ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿನ ಸಮುದಾಯ ಮತ್ತು ವೈಯಕ್ತಿಕ ಶೌಚಾಲಯಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ವಚ್ಛತಾ ಪರಿಶೀಲನೆಯ ಪರಿವೀಕ್ಷಣೆ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA