ಬೀದರ್: ಜಿಲ್ಲೆಯ ಹೀರಾಲಾಲ್ ಮತ್ತು ಪನ್ನಾಲಾಲ್ ಪದವಿಪೂರ್ವ ಕಾಲೇಜಿನ ಪ್ರಥಮ ದ್ವಿತೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಷಕತ್ವ ಯೋಜನೆ ಕುರಿತು ಮಾಹಿತಿ ನೀಡಲಾಯಿತು.
ಪೋಷಕತ್ವ ಯೋಜನೆ ಅಡಿಯಲ್ಲಿ ಮಗುವಿನ ಪಾಲನೆ, ಘೋಷಣೆ, ರಕ್ಷಣೆಗಾಗಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಇವರ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪೂಜ್ಯ ಪೋಷಕತ್ವ ಯೋಜನೆ ಎಂದರೆ, ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬಕ್ಕೆ ತಾತ್ಕಾಲಿಕ ಅಥವಾ ವಿಸ್ತರಿಸಲ್ಪಟ್ಟ ಅವಧಿಯವರೆಗೆ 2 ವರ್ಷಕ್ಕೆ ಮೀರದ ಅವಧಿಯವರೆಗೆ ಬಾಲ ನ್ಯಾಯ ಕಾಯ್ದೆ 2005ರ ಕಲಂ 44ರ ಪ್ರಕಾರ ಮಗುವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಪೋಷಕತ್ವ ಯೋಜನೆಯ ಬೀದರ್ ಜಿಲ್ಲೆಯ ಸಂಯೋಜಕರಾದ ರಮೇಶ್ ಅವರು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳಿಗೆ ದತ್ತು ಮತ್ತು ಪೋಷಕತ್ವ ಯೋಜನೆ ಕುರಿತು ಅರಿವು ಮೂಡಿಸಿದರು. ಪೋಷಕತ್ವ ಎಂದರೆ ಕಾನೂನು ಪ್ರಕಾರ ಅನಾಥವಾಗಿರುವ ಮಕ್ಕಳಿಗೆ ಲಾಲನೆ ಪಾಲನೆ ಪೋಷಣೆ ಇಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕವಾಗಿ ಪರಿವಾರದ ಮೂಲಕ ಸಿಗುವ ಕಾಳಜಿಯೇ ಪೋಷಕತ್ವ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಪ್ರಕಾಶ್ ಹಿಪ್ಪಳಗಾಂವ್ ಅವರು ವಿಶೇಷವಾಗಿ ಬಾಲ್ಯ ವಿವಾಹ ಕುರಿತು ಹಾಗೂ ಮಕ್ಕಳ ಮಾನಸಿಕ ಚಟುವಟಿಕೆ ಕುರಿತು ಬೋಧನೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಡಾನ್ ಬೋಸ್ಕೋ ಬೀದರ್ ನಿರ್ದೇಶಕರಾದ ಫಾದರ್ಸ್ ಸ್ಟೀವನ್ ಲಾರೆನ್ಸ್ ಅವರು ಮತ್ತು ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC