ತುಮಕೂರು: ಜಿಲ್ಲಾಸ್ಪತ್ರೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನರ್ಸಿಂಗ್ ಕಾಲೇಜಿಗೆ ಇದೇ ಮೊದಲ ಬಾರಿಗೆ 10 ರ‍್ಯಾಂಕುಗಳು ಲಭಿಸಿದ್ದು, ರ‍್ಯಾಂಕು ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಅಸ್ಗರ್ ಬೇಗ್ ಹಾಗೂ ಸ್ಥಾನೀಯ ವೈದ್ಯಾಧಿಕಾರಿ ಡಾ.ನಾಗರಾಜ್ ಜಿ. ಅಭಿನಂದನೆ ತಿಳಿಸಿದ್ದಾರೆ.
ಸರ್ಕಾರಿ ನರ್ಸಿಂಗ್ ಕಾಲೇಜು 2019ರಲ್ಲಿ ಪ್ರಾರಂಭವಾಗಿದ್ದು, ಇದುವರೆಗೆ ಒಟ್ಟು 6 ತಂಡಗಳು ನರ್ಸಿಂಗ್ ತರಗತಿಗೆ ದಾಖಲಾಗಿವೆ. 2020–24ನೇ ಸಾಲಿನ 2ನೇ ತಂಡವು ವಿಷಯವಾರು ರಾಜ್ಯದ 10 ರ‍್ಯಾಂಕುಗಳಲ್ಲಿ ತುಮಕೂರು ಸರ್ಕಾರಿ ನರ್ಸಿಂಗ್ ಕಾಲೇಜಿಗೆ ಇದೇ ಪ್ರಥಮ ಬಾರಿಗೆ 10 ರ‍್ಯಾಂಕುಗಳು ಲಭಿಸಿದ್ದು, 1ನೇ ಬಿ.ಎಸ್ಸಿ ನರ್ಸಿಂಗ್ ತರಗತಿಯ ವಿದ್ಯಾರ್ಥಿನಿಯರಾದ ಸುಷ್ಮಾ 8ನೇ ರ‍್ಯಾಂಕ್, ಸಂಗೀತಾ ಮಾದರ್ 9 ಹಾಗೂ ಅಂಜಲಿ ಕಿರಸೂರು ಹಾಗೂ ಗಗನ ಎಂ.ಎಸ್. 10ನೇ ರ‍್ಯಾಂಕ್; 2ನೇ ಬಿ.ಎಸ್ಸಿ ನರ್ಸಿಂಗ್ ತರಗತಿ ವಿದ್ಯಾರ್ಥಿನಿ ದಿವ್ಯ ಎನ್. 8ನೇ ರ‍್ಯಾಂಕ್, 3ನೇ ಬಿ.ಎಸ್ಸಿ ನರ್ಸಿಂಗ್ ತರಗತಿ ವಿದ್ಯಾರ್ಥಿನಿ ಅಂಜಲಿ ಕಿರಸೂರು ಹಾಗೂ ಗಗನ್ ಕುಮಾರ್ ಹೆಚ್. 4ನೇ ರ‍್ಯಾಂಕ್; 4ನೇ ಬಿ.ಎಸ್ಸಿ ನರ್ಸಿಂಗ್ ತರಗತಿ ವಿದ್ಯಾರ್ಥಿನಿ ಕೀರ್ತನಾ ಎಲ್.ಹೆಚ್. 4, ಅಮರ್ ಪೂಜಾರಿ 6 ಹಾಗೂ ಲಾಲಾಸಾಬ್ 9ನೇ ರ‍್ಯಾಂಕ್ ಗಳಿಸಿದ್ದಾರೆ.
ನರ್ಸಿಂಗ್ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರಕಲು ಶ್ರಮಿಸಿದ ಜಿಲ್ಲಾಸ್ಪತ್ರೆಯ ಶುಶ್ರೂಷ ಅಧೀಕ್ಷಕರು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್, ಉಪಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು, ತರಗತಿ ಸಹ ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4