ವರದಿ: ಹಾದನೂರು ಚಂದ್ರ
ಸರಗೂರು: ಆಕರ್ಷಕ ಮೈಕಟ್ಟು ಹೊಂದಿರುವ ಹೋರಿಗಳು ಹಾಗೂ ಒಂದೇ ತರನಾಗಿ ಕಾಣುವ ಜೋಡೆತ್ತುಗಳು ಎತ್ತಿನಗಾಡಿಗೆ ಎರಡು ಟ್ರಾಕ್ಟರ್ ಇಂಜಿನ್ ಕಟ್ಟಿಕೊಂಡು ಎಳೆದುಕೊಂಡು ನಾಗಾಲೋಟದಲ್ಲಿ ಓಡುತ್ತಿದ್ದ ಮೈನವಿರೇಳಿಸುವ ದೃಶ್ಯ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.
ತಾಲೂಕಿನ ಹಾದನೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 3ನೇ ವರ್ಷದ ಜೋಡಿ ಎತ್ತಿನಗಾಡಿಗೆ ಎರಡು ಟ್ರಾಕ್ಟರ್ ಇಂಜಿನ್ ಕಟ್ಟಿಕೊಂಡು ಎಳೆಯುವ ಸ್ಪರ್ಧೆಯನ್ನು ಹಾದನೂರು ಜೈ ಭೀಮ್ ಅಂಬೇಡ್ಕರ್ ಹುಡುಗರ ಬಳಗವತಿಯಿಂದ ಆಯೋಜಿಸಿದ್ದು ನಂತರ ಗ್ರಾಮದ ಯಜಮಾನರು ಹಾಗೂ ಮುಖಂಡರು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಜೋಡಿ ಎತ್ತಿನಗಾಡಿಗೆ ಸ್ಪರ್ಧೆಗೆ ಚಾಲನೆ ನೀಡಿದರು.
ಮೈದಾನದಲ್ಲಿ ತಾ ಮುಂದು, ನಾ ಮುಂದು ಎಂದು ಜೋಡಿ ಎತ್ತಿನ ಗಾಡಿಗಳ ಮೇಲೆ ನಿಂತು ಹಗ್ಗವನ್ನು ಕೈಯಲ್ಲಿ ಹಿಡಿದು ಎತ್ತುಗಳಿಗೆ ಪಟ, ಪಟನೆ ಚಾವಟಿಯಲ್ಲಿ ಬಾರಿಸುತ್ತ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದರೆ, ಮೈದಾನದ ಸುತ್ತಲೂ ನೆರೆದ ಬೆಂಬಲಿಗರು ಹಾಗೂ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.
ಕ್ಷ ಣದಲ್ಲಿಯೇ ಮತ್ತೊಂದು ಜೊತೆ ಎತ್ತಿನ ಗಾಡಿ ಓಟ ಕಣ್ತುಂಬಿಕೊಳ್ಳಲು ಮುತ್ತಿಕೊಳ್ಳುತ್ತಿದ್ದರು. ಮಂಡ್ಯ ಜಿಲ್ಲೆಯ ಜೋಡಿ ಜೋಡೆತ್ತುಗಳಿಗೆ ಮೊದಲನೇ ಶಿರನಹಳ್ಳಿ ಗರುಡ ಸಿಪಾಯಿ.ದ್ವಿತೀಯ ಕಿಲನಪುರ ದಯಾನಂದಸ್ವಾಮಿ .ತೃತೀಯ ಮಂಡ್ಯ ಹುಲಿವಾನ. ಪಂದ್ಯದಲ್ಲಿ ಗೆಲುವು ಸಾಧಿಸಿ ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡರು.
ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳು ಹಾಗೂ ಎಚ್.ಡಿ.ಕೋಟೆ ಸರಗೂರು, ನಂಜನಗೂಡು ತಾಲೂಕಗಳು ಗ್ರಾಮದ ಸೇರಿದಂತೆ 18 ಜತೆ ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ನೌಕಾಟ್ ಮಾದರಿಯಲ್ಲಿ ಸ್ಪರ್ಧೆ ನಡೆಸಲಾಯಿತು.
ಇದಕ್ಕೂ ಮೊದಲು ಹಾದನೂರು ಗ್ರಾಮದ ಪ್ರಮುಖ ಮುಖ್ಯ ಬೀದಿಯಲ್ಲಿ ಜೋಡೆತ್ತುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆಗೆ ಚಾಲನೆ ನೀಡಿದರು. ನಾನಾ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಹಾಗೂ ಯಜಮಾನ ಪ್ರಕಾಶ್, ಸದಸ್ಯರು ರಾಜೇಶ್, ಶಿವರಾಜು, ಕೆಂಪಸಿದ್ದ, ಆಯೋಜಕರು ಗ್ರಾಮೀಣ ಪ್ರದೇಶದ ರೋಮಾಂಚನಕಾರಿ ಕ್ರೀಡೆಯಲ್ಲಿ ಎತ್ತಿನಗಾಡಿ ಓಟವೂ ಒಂದಾಗಿದೆ. ಹಿಂದಿನ ಕಾಲದಲ್ಲಿ ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೈತರು ಮನರಂಜನೆ ಮತ್ತು ಸಾಹಸ ಪ್ರದರ್ಶನಕ್ಕಾಗಿ ಹುಟ್ಟುಹಾಕಿದ ಎತ್ತಿನಗಾಡಿ ಓಟ ಇವತ್ತಿಗೂ ಗ್ರಾಮೀಣ ಭಾಗದ ಪ್ರಮುಖ ಕ್ರೀಡೆಯಾಗಿ ಗಮನಸೆಳೆಯುತ್ತಿದೆ. ಈಗ ಮೊದಲಿಗೆ ಹೋಲಿಸಿದರೆ ಒಂದಷ್ಟು ಬದಲಾವಣೆಗಳೊಂದಿಗೆ ಇನ್ನಷ್ಟು ವೈಭವತೆ ಪಡೆದುಕೊಂಡಿರುವುದು ನಿಜಕ್ಕೂ ಖುಷಿಪಡುವ ಸಂಗತಿಯಾಗಿದೆ.
ಈ ಸಂದರ್ಭದಲ್ಲಿ ಯಜಮಾನರು ರಾಜೇಶ್, ಪ್ರಕಾಶ್, ಗ್ರಾಪಂ ಸದಸ್ಯರು ಶಿವರಾಜು,ಕೆಂಪಸಿದ್ದ, ಆಯೋಜಕರು ನಾಗೇಶ್, ಮೂರ್ತಿ, ರಂಗಸ್ವಾಮಿ, ಮಧು, ಪ್ರಕಾಶ್ (ಕುಳ್ಳ), ರವಿಕುಮಾರ್, ಸುನೀಲ್, ಸೂರ್ಯ, ಆಕಾಶ್, ಸಂಜಯ್, ಅಜೀತ್, ಪಾಪ, ಮುಖಂಡರು ರಾಜಣ್ಣ, ಪುಟ್ಟಸ್ವಾಮಿ, ನಾಗರಾಜು, ಶಿಕ್ಷಕ ಸಿದ್ದಯ್ಯ, ಲೋಕೇಶ್, ರಮೇಶ್, ಸಣ್ಣಸ್ವಾಮಿ, ಶಿವಮೂರ್ತಿ, ಪ್ರಸನ್ನ ಕುಮಾರ್, ನಾಗೇಂದ್ರ, ವೃಷಬೇಂದ್ರೆ, ಅಂಚೆ ಕಚೇರಿ ಧ್ರುವ ಕುಮಾರ್, ಚಿಕ್ಕ ಪುಟ್ಟಯ್ಯ, ನಾರಾಯಣಸ್ವಾಮಿ (ಶನೀಶ್ವರ ಗುಡಪ್ಪ) ಇನ್ನೂ ಮುಖಂಡರು ಸೇರಿದಂತೆ ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯ ಗಮನ ಸೆಳೆದರು.
ಗ್ರಾಮೀಣ ಪ್ರದೇಶದ ರೋಮಾಂಚನಕಾರಿ ಕ್ರೀಡೆಯಲ್ಲಿ ಎತ್ತಿನಗಾಡಿ ಓಟವೂ ಒಂದಾಗಿದೆ. ಹಿಂದಿನ ಕಾಲದಲ್ಲಿ ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೈತರು ಮನರಂಜನೆ ಮತ್ತು ಸಾಹಸ ಪ್ರದರ್ಶನಕ್ಕಾಗಿ ಹುಟ್ಟುಹಾಕಿದ ಎತ್ತಿನಗಾಡಿ ಓಟ ಇವತ್ತಿಗೂ ಗ್ರಾಮೀಣ ಭಾಗದ ಪ್ರಮುಖ ಕ್ರೀಡೆಯಾಗಿ ಗಮನಸೆಳೆಯುತ್ತಿದೆ. ಈಗ ಮೊದಲಿಗೆ ಹೋಲಿಸಿದರೆ ಒಂದಷ್ಟು ಬದಲಾವಣೆಗಳೊಂದಿಗೆ ಇನ್ನಷ್ಟು ವೈಭವತೆ ಪಡೆದುಕೊಂಡಿರುವುದು ನಿಜಕ್ಕೂ ಖುಷಿಪಡುವ ಸಂಗತಿಯಾಗಿದೆ.
ಹಾದನೂರು ಪ್ರಕಾಶ್, ಹಾದನೂರು ಗ್ರಾಪಂ ಉಪಾಧ್ಯಕ್ಷ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC