ದೆಹಲಿ: ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಪ್ರತ್ಯೇಕ ರಾಷ್ಟ್ರ ಮಾಡುವ ಬಗ್ಗೆ ಮಾತನಾಡಿರುವುದು ಅವರ ವ್ಯಕ್ತಿಗತವಾಗಿರಬಹುದು ಪಕ್ಷದ ನಿರ್ಣಯ ಅಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಉದ್ದೇಶದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಈ ವಿಷಯದಲ್ಲಿ ಮಾತನಾಡುವುದು ನಂಗೆ ಇಷ್ಟ ಇಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ದೇಶದಲ್ಲಿ ಸರ್ಕಾರ ನಡೆಸಿದೆ. ಅನ್ಯಾಯವಾದರೆ ನ್ಯಾಯ ಬಜೆಟ್ ಚರ್ಚೆ ವೇಳೆ ಮಾತನಾಡುತ್ತೇವೆ. ಅದರಲ್ಲೇನು ಇಲ್ಲ ಎಂದು ಹೇಳಿದ್ದಾರೆ.
ಕೃಷಿ ನೀರಾವರಿ ಬೇರೆ ಕಡೆ ಹೆಚ್ಚು ಅನುದಾನ ಕೊಡಬೇಕು ಅಂತಾ ನಾನು ಮಾತನಾಡಿದ್ದೇನೆ. ಬಹಳಷ್ಟು ಕಠುವಾಗಿ ಮಾತನಾಡಿದ್ದೇನೆ. ಆದರೆ ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿಲ್ಲ. ಒಂದು ರಾಷ್ಟ್ರೀಯ ಪಕ್ಷದ ಸದಸ್ಯರಾಗಿ ಯಾವ ಆಯಾಮದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದು ಹೆಚ್.ಡಿ.ದೇವೇಗೌಡ ಹೇಳಿದರು.


