ಚೆನ್ನೈ: ಚೆನ್ನೈನಲ್ಲಿರುವ ಡಿಎಂಕೆ ಶಾಸಕ ಐ ಕರುಣಾನಿಧಿ ಅವರ ಪುತ್ರನ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ದಲಿತ ಬಾಲಕಿಯನ್ನು ಶಾಸಕ ಐ ಕರುಣಾನಿಧಿ ಅವರ ಪುತ್ರನ ಮನೆಯವರು ಹಲವಾರು ತಿಂಗಳುಗಳಿಂದ ಸಂಬಳ ನೀಡದೆ ದೈಹಿಕ ಹಿಂಸೆ ನೀಡಲಾಗುತಿದೆ ಎನ್ನಲಾಗಿದೆ.
ತಿರುವನ್ಮಿಯೂರಿನ ಗ್ರೀನ್ ಮೆಡೋಸ್ ಅಪಾರ್ಟ್‌ಮೆಂಟ್‌ನ ಮನೆ ಮಾಲೀಕರಾದ (ಡಿಎಂಕೆ ಶಾಸಕ) ಆಂಡ್ರೊ ಮತಿವನನ್ ಪುತ್ರ ಮತ್ತು ಮರ್ಲಿನಾ (ಡಿಎಂಕೆ ಶಾಸಕರ ಸೊಸೆ) ಪದೇ ಪದೇ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ವೈದ್ಯಕೀಯ ಸಹಾಯವನ್ನು ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. .
ಸಂತ್ರಸ್ತೆ ತನ್ನ ಪಿ.ಯುತರಗತಿಯನ್ನು ಪೂರ್ಣಗೊಳಿಸಿದ ನಂತರ, ಮರ್ಲಿನಾ ಮತ್ತು ಆಂಟೊ ಮತಿವನನ್ ಅವರ ಮನೆಯಲ್ಲಿ ಏಜೆಂಟ್ ಮೂಲಕ ಮನೆಕೆಲಸಕ್ಕೆ ಸೇರಿಕೊಂಡಳು. ತನ್ನ ಕುಟುಂಬದೊಂದಿಗೆ ಮಾತನಾಡುವುದನ್ನು ಕೂಡ ಕುಂಟುಂಬ ನೀರಾಕರಿಸಿತ್ತು.
ಸಂತ್ರಸ್ತೆ ಪೊಂಗಲ್‌ಗೆಂದು ತನ್ನ ಮನೆಗೆ ಬಂದ ನಂತರ ತನ್ನ ಸ್ವಂತ ಊರಾದ ಕಲ್ಲಕುರುಚಿ ಜಿಲ್ಲೆಯ ಉಲುಂದೂರುಪೇಟೆ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಆಕೆಯ ದೇಹದಾದ್ಯಂತ ಹಲವು ಗಾಯಗಳಾಗಿರುವುದರಿಂದ ಉಳುಂದೂರುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿತ್ತು.
ಈ ವಿಷಯ ತಿಳಿಯುತ್ತಿದಂತೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಈ ವಿಷಯವನ್ನು ಕೈಗೆತ್ತಿಕೊಂಡರು ಮತ್ತು ದಂಪತಿಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಡಿಎಂಕೆ ಸರ್ಕಾರವನ್ನು ಒತ್ತಾಯಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ) ಕಾಯ್ದೆಯಡಿ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ, ”ಎಂದು ಅಣ್ಣಾಮಲೈ ಹೇಳಿದರು.


