ಹಿರಿಯ ಪತ್ರಕರ್ತ ಸುಧೀರ್ ಚೌಧರಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಗರ ಪೊಲೀಸರಿಗೆ ಮೌಖಿಕವಾಗಿ ಸೂಚಿಸಿದೆ.
ಆಜ್ ತಕ್ ನ್ಯೂಸ್ ಚಾನೆಲ್ ಮತ್ತು ಟಿವಿ ಟುಡೇ ನೆಟ್ ವರ್ಕ್ ಲಿಮಿಟೆಡ್ ಆಯಂಕರ್ ಸುಧೀರ್ ಚೌಧರಿ ವಿರುದ್ಧ ಸೆಪ್ಟೆಂಬರ್ 12 ರಂದು, ದ್ವೇಷವನ್ನು ಉತ್ತೇಜಿಸುವ ಮಾತುಗಳು ಮತ್ತು ತಪ್ಪು ಮಾಹಿತಿ ರವಾನೆ ಎಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.


